ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ತೆನೆ ಮುಹೂರ್ತ, ಸಾಕ್ಷಾಚಿತ್ರ ಬಿಡುಗಡೆ

0

ಕುಲ್ಕುಂದದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೆ.25 ರಂದು ತೆನೆ ಮುಹೂರ್ತ ನೆರವೇರಿತು.


ಆರಂಭದಲ್ಲಿ ತೆನೆಯನ್ನು ಮೆರವಣಿಗೆ ಮೂಲಕ ತಂದು ಅದಕ್ಕೆ ಶ್ರೀ ದೇವರ ಮುಂಭಾಗ ಪೂಜೆ ಸಮರ್ಪಿಸಲಾಯಿತು.ಬಳಿಕ ದೇವರಿಗೆ ತೆನೆ ಸಮರ್ಪಣೆ ನಡೆದು ಭಕ್ತರಿಗೆ ತೆನೆಯನ್ನು ದೇವಳದ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ವಿತರಣೆ ಮಾಡಿದರು. ಮದ್ಯಾಹ್ನ ನವಾನ್ನ ಬೋಜನ ನೆರವೇರಿತು.ಸಹಸ್ರಾರು ಭಕ್ತರು ಶ್ರೀ ದೇವಳಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿ ನವಾನ್ನ ಬೋಜನ ಪ್ರಸಾದ ಸ್ವೀಕರಿಸಿದರು. ತೆನೆ ಮುಹೂರ್ತದ ಅಂಗವಾಗಿ ಮದ್ಯಾಹ್ನ ಸಾಮೂಹಿಕ ಚಂಡಿಕಾ ದುರ್ಗಾ ಹವನ ನಡೆಯಿತು. ರಾತ್ರಿ ಶ್ರೀ ದುರ್ಗಾ ಪೂಜೆ ನೆರವೇರಿತು.

ಸಾಕ್ಷಾಚಿತ್ರ ಬಿಡುಗಡೆ
ಬಸವನಮೂಲದ ಶ್ರೀ ಬಸವೇಶ್ವರ ದೇವಳದ ಪುರಾಣ, ಇತಿಹಾಸ ವನ್ನು ಒಳಗೊಂಡ ಶ್ರೀ ಬಸವೇಶ್ವರ ದರ್ಶನ ಎಂಬ ಸಾಕ್ಷಾಚಿತ್ರವನ್ನು ವಾಸ್ತು ಶಿಲ್ಪಿ ಎಸ್.ಎಂ.ಪ್ರಸಾದ್ ಮುನಿಯಂಗಳ ಗ ಶ್ರೀ ದೇವಳದಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ದೇವಾಲಯದ ಆಡಳಿತ ಸಮಿತಿ ಸದಸ್ಯ ಕೆ.ಯಜ್ಞೇಶ್ ಆಚಾರ್, ಹಿರಿಯ ಶಿಕ್ಷಕ ಎ.ಕೃಷ್ಣ ಭಟ್, ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.