ಅಧ್ಯಕ್ಷೆ : ಸರಸ್ವತಿ ಅಡ್ತಲೆ, ಕಾರ್ಯದರ್ಶಿ : ರೇಖಾ ಬೆದ್ರುಪಣೆ
ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನೂತನವಾಗಿ ಚಂದನಾ ಮಹಿಳಾ ಮಂಡಲ ಇತ್ತೀಚೆಗೆ ರಚನೆಗೊಂಡಿದೆ.
ಮಹಿಳಾ ಮಂಡಲ ಅಧ್ಯಕ್ಷರಾಗಿ ಸರಸ್ವತಿ ಚಿದಾನಂದ ಅಡ್ತಲೆ, ಉಪಾಧ್ಯಕ್ಷರಾಗಿ ಯಶೋದ ಜಯರಾಮ ಅಡ್ತಲೆ, ಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಜಿತ್ ಪಿಂಡಿಮನೆ, ಕೋಶಾಧಿಕಾರಿಯಾಗಿ ದಿವ್ಯ ಮೋಹನ್ ಅಡ್ತಲೆ ಆಯ್ಕೆಯಾಗಿದ್ದಾರೆ.
ನಿರ್ದೆಶಕರಾಗಿ ಶ್ಯಾಮಲಾ ಹರಿಪ್ರಸಾದ್ ಅಡ್ತಲೆ, ಸುಜಯ ಲೋಹಿತ್ ಮೇಲಡ್ತಲೆ, ಲತಾ ಜಯರಾಮ ಮೇಲಡ್ತಲೆ, ಕವಿತಾ ವಿಶ್ವನಾಥ್ ಅಡ್ತಲೆ, ವಿಮಲಾ ಶಶಿಕುಮಾರ್ ಉಳುವಾರು, ಜಯಲತಾ ಭವಾನಿಶಂಕರ್ ಅಡ್ತಲೆ, ದಿನೇಶ್ವರಿ ಶಿವರಾಮ ಪಿಂಡಿಮನೆ, ಹಸ್ತವಿ ಹೇಮಾಕುಮಾರ ಚೀಮಾಡು ಆಯ್ಕೆಗೊಂಡರು.















ಸದಸ್ಯರಾಗಿ ಮನಿಮಾಲ ಅಡ್ತಲೆ, ವಸಂತಿ ಪಿಂಡಿಮನೆ, ಜಯಂತಿ ಪಿಂಡಿಮನೆ, ಆಶಾ ಬೆದ್ರುಪಣೆ, ಹೇಮಾವತಿ ಮೇಲಡ್ತಲೆ, ಶುಭಲಕ್ಷ್ಮಿ ಮೇಲಡ್ತಲೆ, ಅನುರಾಧ ಅಡ್ತಲೆ ಆಯ್ಕೆ ಆಗಿರುತ್ತಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಕಾರ್ಯದರ್ಶಿ ರಂಜಿತ್ ಅಡ್ತಲೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಇತರರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆ ನೀಡಿದರು.
ಪ್ರಾರಂಭಿಕ ಸಭೆಯಲ್ಲಿ ಮಹಿಳಾ ಮಂಡಲದ ಬೈಲಾವನ್ನು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನೂತನ ನಿರ್ದೇಶಕರಾಗಿ ಆಯ್ಕೆ ಆಗಿರುವ ವಿನಯ್ ಬೆದ್ರುಪಣೆ ಅವರು ಸವಿವರವಾಗಿ ತಿಳಿಸಿ, ನೂತನ ಮಹಿಳಾ ಮಂಡಳ ಅಡ್ತಲೆಯಲ್ಲಿ ರಚಿಸುವಲ್ಲಿ ಸ್ಫೂರ್ತಿ ತುಂಬಿಸಿದರು.










