ಭಾರತೀಯ ದಂತ ವೈದ್ಯಕೀಯ ಸಂಘದ ಸುಳ್ಯ ಶಾಖೆಯಲ್ಲಿ ನಿರಂತರ ದಂತ ಶಿಕ್ಷಣದ ಕಾರ್ಯಕ್ರಮವು ಸೆ. 28 ರಂದು ಕೆವಿಜಿ ದಂತ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ‘ಬಾಯಿ ಮತ್ತು ಮುಖದ ಚಿಕಿತ್ಸೆಯಲ್ಲಿ ಎಕ್ಸ್ -ರೇ ಯ ಪರಿಣಾಮಕಾರಿ ಉಪಯೋಗ’ ದ ವಿಚಾರದ ಕುರಿತು ಪಾಂಡಿಚೇರಿ ವಿಶ್ವವಿದ್ಯಾಲಯದ ಮಾಹೆ ಡೆಂಟಲ್ ಕಾಲೇಜಿನ ಬಾಯಿಯ ವೈದ್ಯಕೀಯ ವಿಭಾಗದ ನಿಕಟಪೂರ್ವ ಮುಖ್ಯಸ್ಥ, ಪ್ರೊಫೆಸರ್ ಡಾ| ರಾಜ್ ಎ ಸಿ ಅತಿಥಿ ಉಪನ್ಯಾಸ ನೀಡಿದರು.















ಐಡಿಎ ಸುಳ್ಯ ಶಾಖೆಯ ಅಧ್ಯಕ್ಷ ಡಾ. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ಉದ್ಘಾಟಿಸಿ ಅತಿಥಿಗಳಿಗೆ ಸ್ವಾಗತ ಕೋರಿದರು. ಕಾರ್ಯದರ್ಶಿ ಡಾ. ಜಯಪ್ರಸಾದ ಆನೆಕಾರ ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದಗಳನ್ನು ಅರ್ಪಿಸಿದರು. 50 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ಕಾಲ್ಗೇಟ್ ಇಂಡಿಯಾ ಕಂಪೆನಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು.










