ಸುಳ್ಯ ಶಾರದಾಂಬ ಉತ್ಸವ- ದಸರಾ ಆರಂಭ

0

ಶ್ರೀ ಶಾರದಾದೇವಿಯ ಪ್ರತಿಷ್ಢಾ ಮೆರವಣಿಗೆ- ದೇವಿಯ ಪ್ರತಿಷ್ಠೆ

ಸುಳ್ಯದ ಪ್ರಸಿದ್ಧ 54ನೇ ವರ್ಷದ ಶ್ರೀ ಶಾರದಾಂಬ ಉತ್ಸವ – ದಸರಾ -2025 ಇಂದಿನಿಂದ ಆರಂಭಗೊಂಡಿದೆ.

ಇಂದು ಬೆಳಿಗ್ಗೆ ಗಣಪತಿ ಹವನ, ಸುಳ್ಯದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆಯಿತು. ನಂತರ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ವೆ.ಮೂ.ನಾಗರಾಜ ಭಟ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ನಾರಾಯಣ ಕೇಕಡ್ಕ, ಕೆ.ಗೋಕುಲದಾಸ್, ಕೃಷ್ಣ ಕಾಮತ್ ಅರಂಬೂರು, ಡಾ.ಲೀಲಾಧರ್ ಡಿ.ವಿ., ನವೀನ್ ಚಂದ್ರ ಕೆ.ಎಸ್., ಬೂಡು ರಾಧಾಕೃಷ್ಣ ರೈ, ಸುನಿಲ್ ಕುಮಾರ್ ಕೇರ್ಪಳ, ಎಂ.ಕೆ.ಸತೀಶ್, ಲತಾ ಮಧುಸೂಧನ್, ಯಶೋಧ ರಾಮಚಂದ್ರ, ರಾಜು ಪಂಡಿತ್, ರವಿಚಂದ್ರ ಕೊಡಿಯಾಲಬೈಲ್, ಕೃಷ್ಣ ಬೆಟ್ಟ ಮೊದಲಾದವರು, ಸಮಿತಿಗಳ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.