ಸುಳ್ಯ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ತಾಗಿದ ಸ್ಕೂಟಿ- ಮಹಿಳೆಗೆ ಹಾಗೂ ಸ್ಕೂಟಿ ಸವಾರನಿಗೆ ಗಾಯ

0

ಸುಳ್ಯದ ಕೆ.ಎಸ್.ಆರ್. ಟಿ. ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೋರ್ವರಿಗೆ ಸ್ಕೂಟಿಯೊಂದು ಡಿಕ್ಕಿ ಹೊಡೆದ ಘಟನೆ ಇದೀಗ ವರದಿಯಾಗಿದೆ.

ರಸ್ತೆಯ ಬಲಬದಿಯಿಂದ ಎಡಬದಿಗೆ ದಾಟುತ್ತಿದ್ದ ಮಹಿಳೆಗೆ ರಥಬೀದಿ ಕಡೆಯಿಂದ ಬಂದ ಸ್ಕೂಟಿ ಸವಾರ ಡಿಕ್ಕಿ ಹೊಡೆದಿದ್ದು ಮಹಿಳೆಗೆ ಮತ್ತು ಸ್ಕೂಟಿ ಸವಾರರಿಗೆ ಅಲ್ಪಸಲ್ಪ ಗಾಯಗಳಾಗಿದೆ.

ಸ್ಕೂಟಿಯಲ್ಲಿ ಐಸ್ ಕ್ರೀಮ್ ಸಾಗಾಟ ಮಾಡುತ್ತಿರುವ ಯುವಕ ಸಡನ್ನಾಗಿ ಮಹಿಳೆ ದಾಟುವ ಸಂದರ್ಭದಲ್ಲಿ ಸ್ಕೂಟಿಯ ಹಿಂದುಗಡೆ ಇರಿಸಿದ್ದ ಬ್ಯಾಗ್ ಮಹಿಳೆಗೆ ತಾಗಿತೆಂದು ಇದರಿಂದ ರಸ್ತೆಗೆ ಬಿದ್ದ ಮಹಿಳೆಗೆ ಗಾಯವಾಗಿದೆ. ಸ್ಕೂಟಿ ಸವಾರನು ಬಿದ್ದುದರಿಂದ ಕೈಗೆ ಮತ್ತು ಕಾಲಿಗೆ ಅಲ್ಪ ಸ್ವಲ್ಪ ಗಾಯಗಳಾಗಿದೆ ಎಂದು ತಿಳಿದುಬಂದಿದೆ.