ಸುಳ್ಯ ದಸರಾದ 2ನೇ ದಿನ ಇಂದು ಮಹಿಳಾ ದಸರಾ ಕಾರ್ಯಕ್ರಮವು ಶಾರದಾಂಬಾ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ, ಐಶ್ವರ್ಯ ಕುರುಂಜಿ, ಶೋಭಾ ಚಿದಾನಂದ, ಮಹಿಳಾ ವೇದಿಕೆಯ ಗೌರವಾಧ್ಯಕ್ಷರು ಯಶೋಧ ರಾಮಚಂದ್ರ, ಸುಳ್ಯ ದಸರಾ ಮಹಿಳಾ ವೇದಿಕಯ ಅಧ್ಯಕ್ಷರು ಲತಾ ಮಧುಸೂಧನ್ ಮತ್ತು ಮಹಿಳಾ ವೇದಿಕೆಯ ಪದಾಧಿಕಾರಿಗಳು ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.















ನಂತರ ಮಹಿಳೆಯರಿಗೆ ವಿವಿಧ ಸ್ಪರ್ಧ ಕಾರ್ಯಕ್ರಮವು ನಡೆಯಿತು. ಇಂದಿನ ಮಧ್ಯಾಹ್ನನದ ಊಟದ ಪ್ರಾಯೋಜಕರಾಗಿ ಶ್ರೀಮತಿ ಮತ್ತು ಅಶೋಕ್ ಪ್ರಭು ಮತ್ತು ಮನೆಯವರು ಮತ್ತು ಕೆನಡಾ ದಲ್ಲಿ ಉದ್ಯೋಗಿ ಆಗಿರುವ ಶ್ರೀಮತಿ ಚೈತನ್ಯ ಜೀವನ್ ಹಾಗೂ ಮನೆಯವರು ನೀಡಿ ಸಹಕರಿಸಿದ್ದಾರೆ.
ಸಂಜೆ ಭಜನಾ ಕಾರ್ಯಕ್ರಮ, ನೃತ್ಯ ಸಂಗಮ, ನೃತ್ಯ ರೂಪಕ, ಶ್ರೀನಿವಾಸ ಕಲ್ಯಾಣ, ನಿರ್ದೇಶಕರಾದ ವಿದ್ಯಾಶ್ರೀ ರಾಧಕೃಷ್ಣ ಇವರ ನೇತೃತ್ವದಲ್ಲಿ ನಡೆಯಲಿದೆ. ನಂತರ ಮಹಾಪೂಜೆ ನಡೆಯಲಿದೆ.










