ಕುಕ್ಕಟ್ಟೆ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

0

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಸೆ. 22 ರಿಂದ ಕ್ಷೇತ್ರದ ಪುರೋಹಿತರಾದ ಬಾಲಕೃಷ್ಣ ಪುರೋಹಿತರ ಪೌರೋಹಿತ್ಯದಲ್ಲಿ ವಿವಿಧ ಪೂಜೆಗಳೊಂದಿಗೆ ನವರಾತ್ರಿ ಮಹೋತ್ಸವ ನಡೆಯಿತು.

ಸೆ. 30 ರಂದು ಬೆಳಿಗ್ಗೆ ಭದ್ರಕಾಳಿ ಹೋಮ ನಡೆದು ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ, ಸೇವಾ ಸಮಿತಿ ಹಾಗೂ ಭಕ್ತ ಜನರು ಉಪಸ್ಥಿತರಿದ್ದರು.

ವರದಿ : ಎ. ಎಸ್. ಎಸ್