ಅಧ್ಯಕ್ಷರಾಗಿ ಪಳಂಗಪ್ಪ ಪಾಣತ್ತಲೆ, ಕಾರ್ಯದರ್ಶಿಯಾಗಿ ಸೋಮಪ್ಪ ಕುಂಭಗೌಡನ
ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು, ಇದರ 2025-26 ಮತ್ತು 2026-27ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ಸೆ.28 ರಂದು ಸಮಾಜದ ಆಡಳಿತ ಮಂಡಳಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪಳಂಗಪ್ಪ ಪಾಣತ್ತಲೆ, ಉಪಾಧ್ಯಕ್ಷರಾಗಿ ನಾಗೇಶ್ ಕುಮಾರ್ ಕಲ್ಲುಮುಟ್ಲು, ಗೌರವ ಕಾರ್ಯದರ್ಶಿಯಾಗಿ ಸೋಮಣ್ಣ ಕುಂಭಗೌಡ, ಕೋಶಾಧಿಕಾರಿಗಳಾಗಿ ರಾಧಾಕೃಷ್ಣ ಗುತ್ತಿಗಾರುಮೂಲೆ, ಜಂಟಿ ಕಾರ್ಯದರ್ಶಿಗಳಾಗಿ ನಾಗೇಶ್ ಉಳುವಾರು ಬಂಟೋಡಿ ಹಾಗೂ ಶ್ರೀಮತಿ ನೇಹ ರೋಷನ್ ಪೋರೆಯನರವರು ಅವಿರೋಧವಾಗಿ ಪುನರಾಯ್ಕೆಯಾಗಿರುತ್ತಾರೆ.















ಸಮಾಜದ ಆಡಳಿತ ಮಂಡಳಿಯಲ್ಲಿ 24 ಜನ ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.










