














ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಸುಳ್ಯ ಎ.ಪಿ.ಎಂ.ಸಿ ಮಾಜಿ ನಾಮನಿರ್ದೇಶಕ ಸದಸ್ಯ ಐವರ್ನಾಡು ಗ್ರಾಮದ ಹಸಿಯಡ್ಕ ಕೇಶವ ಗೌಡರವರು ಅನಾರೋಗ್ಯದಿಂದ ಅ.1 ರಂದು ರಾತ್ರಿ ನಿಧನರಾಗಿರುವುದಾಗಿ ತಿಳಿದು ಬಂದಿದೆ.
ಇವರು ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನಾಮನಿರ್ದೇಶಕರಾಗಿ, ನಿಡುಬೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಯುವಶಕ್ತಿ ಸಂಘದ ಹಿರಿಯ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು.
ಇವರಿಗೆ 67 ವರ್ಷ ಪ್ರಾಯವಾಗಿದ್ದು ಪತ್ನಿ ಶ್ರೀಮತಿ ಸವಿತ,ಪುತ್ರ ಕವನ್ ಹಾಗೂ ಸೊಸೆ ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಗಂಟೆ 10.00 ಕ್ಕೆ ಹಸಿಯಡ್ಕ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.










