ಸಂಘ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ : ಡಾ.ರವಿಕಾಂತ್ ಆಶಯ

“100 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆದು ಬಂದಿರೋದು ಹಿಂದೂಗಳಾದ ನಮಗೆಲ್ಲರಿಗೂ ಹೆಮ್ಮೆ. ಈ ಸಂಘಟನೆ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ” ಎಂದು ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರಾದ ಡಾ.ರವಿಕಾಂತ್ ಹೇಳಿದರು.

ವಿಜಯದಶಮಿ ದಿನವಾದ ಅ.2ರಂದು ಆರ್.ಎಸ್.ಎಸ್. ಸಂಘ ಶತಾಬ್ದಿ ಪ್ರಯುಕ್ತ ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಸಭಾಂಗಣದಲ್ಲಿ ನಡೆದ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
















“ಆರ್.ಎಸ್.ಎಸ್. ಸಂಘಟನೆಯು ಜಾತಿ ಧರ್ಮ ಮೀರಿ ಸಾಮಾಜಿಕ ಕಾರ್ಯದಲ್ಲಿ ನಿರಂತರ ವಾಗಿ ತೊಡಗಿಸಿಕೊಳ್ಳುವುದರ ಜತೆಗೆ ನಮ್ಮ ಸಂಪ್ರದಾಯ ಆಚಾರ ವಿಚಾರಗಳಿಗೆ ಮಹತ್ವ ನೀಡಿ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.

ಬಿಜೆಪಿ ರಾಜ್ಯ ಸಂಘಟನಾ ಮಾಜಿ ಕಾರ್ಯದರ್ಶಿ, ಆರ್.ಎಸ್.ಎಸ್. ಪ್ರಚಾರಕರಾದ ರಾಜೇಶ್ ಜಿ.ವಿ. ಬೌದ್ದಿಕ್ ನೀಡಿ, ಸಂಘದ ಆಶಯದ ಕುರಿತು ವಿವರ ನೀಡಿದರು.
ನೂರಾರು ಮಂದಿ ಆರ್.ಎಸ್.ಎಸ್. ಗಣವೇಶದಲ್ಲಿ ಭಾಗವಹಿಸಿದರು.
ಆಗಮಿಸಿದ ಎಲ್ಲರೂ ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿದರು.










