ಕುಂಬ್ರ ಲಲಿತಾ ಎಸ್. ಆಳ್ವ ನಿಧನ

0

ಮುಕ್ಕೂರು ‌: ಪೆರುವಾಜೆ ಗ್ರಾಮದ ಆಳ್ವ ಫಾರ್ಮ್ಸ್ ನ ದಿ.ಬೋಳೋಡಿ ಸೀತಾರಾಮ ಆಳ್ವ ಅವರ ಧರ್ಮಪತ್ನಿ ಲಲಿತಾ ಎಸ್ ಆಳ್ವ (92) ಅ‌.3 ರಂದು ನಿಧನ ಹೊಂದಿದರು.

ಪೆರುವಾಜೆ ಗ್ರಾಮದಲ್ಲಿ ಹಿರಿಯರಾಗಿ ಮಾತೃ ಹೃದಯಿಯಾಗಿ ನೂರಾರು ಜನರ ಪ್ರೀತಿ ಸಂಪಾದಿಸಿದ್ದರು. ಹಲವು ಗೌರವ ಸಮ್ಮಾನಗಳು ಸಂದಿವೆ.

ಮೃತರು ಪುತ್ರರಾದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ , ಹೊಟೇಲ್ ಉದ್ಯಮಿ ದಿವಾಕರ ಆಳ್ವ, ಪುತ್ರಿ ಚಿತ್ರಾಲೇಖಾ ರೈ ಅಡಪ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ವಿಧಿ ವಿಧಾನ ಗಳನ್ನು ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಆಳ್ವ ಫಾರ್ಮ್ಸ್ ನಲ್ಲಿ ನಡೆಸಲಾಗುವುದು ಎಂದು ಮನೆಯವರು ಮಾಹಿತಿ ನೀಡಿದ್ದಾರೆ.