ಶಾರದಾ ವೇದಿಕೆಯಲ್ಲಿ ದಿನವಿಡೀ ಮಕ್ಕಳ ಕಲರವ

ಸುಳ್ಯ ದಸರಾ ಉತ್ಸವದಲ್ಲಿ ಐದನೇ ದಿನವಾದ ಅ.3ರಂದು ಮಕ್ಕಳ ದಸರಾ ಉತ್ಸವ ನಡೆಯುತ್ತಿದೆ. ಬೆಳಗ್ಗೆ ಯಿಂದ ಸಂಜೆಯವರೆಗೆ ದಿನವಿಡೀ ಶಾರದೆಯ ವೇದಿಕೆಯಲ್ಲಿ ಮಕ್ಕಳ ಕಲರವ ನಡೆಯುವುದು.
ಮಕ್ಕಳ ದಸರಾ ಸಭಾ ಕಾರ್ಯಕ್ರಮ ವನ್ನು ಪ್ರತಿಭಾನ್ವಿತ ಕಲಾವಿದರಾದ ಸ್ವರಾ ಎನ್.ಎಲ್., ಆದಿತ್ಯ ಪಿ ಪ್ರಮೋದ್, ದೈವಿಕ್ ಪಿ. ಪ್ರಮೋದ್ ರವರು ದೀಪ ಬೆಳಗಿ ಉದ್ಘಾಟಿಸಿದರು.

ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ., ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಮಧುಸೂದನ್, ಮಕ್ಕಳ ದಸರಾ ಸಂಯೋಜಕ ಲೋಕೇಶ್ ಊರುಬೈಲು, ದಿನದ ಕಾರ್ಯಕ್ರಮ ಉಸ್ತುವಾರಿಗಳಾದ ಕೃಷ್ಣ ಬೆಟ್ಟ, ಬಾಲಕೃಷ್ಣ ಎಸ್.ಬಿ. ಲ್ಯಾಬ್, ಬಹುಮಾನ ಪ್ರಾಯೋಜಕರಾದ ಸ್ವಾಗತ್ ಐಸ್ ಕ್ರೀಂ ಪ್ರಭಾಕರನ್ ನಾಯರ್, ಶ್ರೀಮತಿ ಶಶಿಕಲಾ ಪ್ರಭಾಕರನ್,
ಶ್ರೀಮತಿ ಜಯಕೃಷ್ಣ, ಶ್ರೀಮತಿ ಸುನಂದ ಶೆಟ್ಟಿ ವೇದಿಕೆಯಲ್ಲಿ ಇದ್ದರು.
















ಬೆಳಗ್ಗೆ ನಿಂದ ಸಂಜೆಯ ತನಕ ಮಕ್ಕಳಿಗೆ ಸ್ಪರ್ಧೆಗಳು, ಮನೋರಂಜನಾ ಕಾರ್ಯಕ್ರಮ ನಡೆಯುವುದು.

ಸಂಜೆ 7.30ರಿಂದ ಮಂಜು ಬ್ರದರ್ಸ್ ಸುಳ್ಯ, ರಂಗ ಮಯೂರಿ ಕಲಾಶಾಲೆ ಸುಳ್ಯ, ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ, ಎಕ್ಸ್ಟಸಿ ಡ್ಯಾನ್ಸ್ ಕ್ರಿವ್ ಸುಳ್ಯ, ಡಿ. ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇವರಿಂದ ನೃತ್ಯೋತ್ಸವ ನಡೆಯುವುದು.










