ರಾಷ್ಟ್ರ ಜಗದ್ಗುರುವಾಗಿ ನಿಲ್ಲುವಂತೆ ಯೋಜನೆ : ಭುವನೇಶ್ವರ ಕಲ್ಲೇರಿ
“ವಿಜಯ ದಶಮಿ ಯ ಈ ಸಂಧರ್ಭದಲ್ಲಿ 100 ವರ್ಷ ತುಂಬುತ್ತಾ ಇದೆ.ಈ ಶತಾಬ್ದಿ ಯ ವರ್ಷದಲ್ಲಿ ಈ ಸಂಘ ಒಂದು ವರ್ಷದಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ.ಪಂಚ ಪರಿವರ್ತನೆ ಯ ಮೂಲಕ ಮತ್ತೆ ಈ ಅಮೂಲಾಗ್ರ ಬದಲಾವಣೆ ತರುವುದರ ಮುಖಾಂತರ ರಾಷ್ಟ್ರ ಜಗದ್ಗುರು ವಾಗಿ ನಿಲ್ಲುವಂತ ಯೋಚನೆ – ಯೋಜನೆ ಇವತ್ತು ಆಗಿದೆ.
ಸಂಘದಲ್ಲಿ ರಾಷ್ಟ್ರೀಯತೆಯ ಮೂಲಕ ದೇಶವನ್ನು ಕಟ್ಟುವಂತ ವ್ಯವಸ್ಥೆ ಯಲ್ಲಿ ನಿರಂತರವಾಗಿ 100 ವರ್ಷ ದಲ್ಲಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಪ್ರಚಾರಕ ಭುವನೇಶ್ವರ ಕಲ್ಲೇರಿ ಹೇಳಿದರು.















ವಿಜಯದಶಮಿ ದಿನವಾದ ಅ.2ರಂದು ಆರ್.ಎಸ್.ಎಸ್. ಸಂಘ ಶತಾಬ್ದಿ ಪ್ರಯುಕ್ತ ಐವರ್ನಾಡು ಮಂಡಲದ ಐವರ್ನಾಡು, ಅಮರಪಡ್ನೂರು ಗ್ರಾಮದ ವತಿಯಿಂದ
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಸಭಾಂಗಣದಲ್ಲಿ ನಡೆದ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ದ ಅತಿಥಿಯಾಗಿ ಡಾ.ಗೌರಿ ಶಂಕರ್ ಉಪಸ್ಥಿತರಿದ್ದರು.
ಜಿಲ್ಲಾ ಆರ್.ಎಸ್.ಎಸ್. ಪ್ರಚಾರಕರಾದ ಭುವನೇಶ್ವರ ಕಲ್ಲೇರಿ.ಬೌದ್ದಿಕ್ ನೀಡಿ, ಸಂಘದ ಆಶಯದ ಕುರಿತು ವಿವರ ನೀಡಿದರು.
ನೂರಾರು ಮಂದಿ ಆರ್.ಎಸ್.ಎಸ್. ಗಣವೇಶದಲ್ಲಿ ಭಾಗವಹಿಸಿದರು.
ಆಗಮಿಸಿದ ಎಲ್ಲರೂ ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿದರು.










