ಪಂಜ : ಮಾಡಬಾಗಿಲು ಆನಂದ ಗೌಡ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

0

ಸದ್ವಿನಿಯೋಗದಿಂದ ಕೊಡುಗೆಯ ಋಣ ತೀರಿಸಿ : ಪದ್ಮನಾಭ ಬಿಳಿಮಲೆ

ಶ್ರೀ ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ (ರಿ) ಇದರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅ.2 ರಂದು
ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಿವಿಧ ವಿಷಯಗಳಲ್ಲಿ ಸುಳ್ಯ ಮತ್ತು ಕಡಬ ತಾಲೂಕು ಮಟ್ಟದಲ್ಲಿ ಸ್ಥಾನ ಪಡೆದ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ವಿತರಿಸಿ ಪುರಸ್ಕರಿಸಲಾಯಿತು.

ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಪದ್ಮನಾಭ ಗೌಡ ಬಿಳಿಮಲೆಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆನಂದ ಗೌಡರು ಇಂಥ ಕೊಡುಗೆಯ ಮೂಲಕ ವಿದ್ಯಾ ಯಜ್ಞವನ್ನೇ ಮಾಡಿದ್ದಾರೆ. ವಿದ್ಯಾರ್ಥಿ ವೇತನ ಪಡೆದವರು ಸದ್ವಿನಿಯೋಗಪಡಿಸುವ ಮೂಲಕ ಕೊಡುಗೆಯ ಋಣ ತೀರಿಸಬೇಕು ಎಂದರು.

ಟ್ರಸ್ಟ್ ನ ಅಧ್ಯಕ್ಷ ಬಿ. ಎಂ. ಆನಂದ ಗೌಡ ಮಾಡಬಾಗಿಲು ಕಂಬಳ ಸಭಾಧ್ಯಕ್ಷತೆ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು. ಕೆ. , ನ್ಯಾಯವಾದಿ ದಿನೇಶ್ ಮಡಪ್ಪಾಡಿ , ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ , ಕಾಲೇಜಿನ ಪ್ರಾಂಶುಪಾಲ ಚಿದಾನಂದ ಕೆ. , ಮುಖ್ಯೋಪಾಧ್ಯಾಯ ದೇವಿಪ್ರಸಾದ್ ಎ , ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಚಿನ್ನಪ್ಪ ಕಾಣಿಕೆ , ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ಬಿ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ
ಸವಿತಾರ ಮುಡೂರು ಭಾಗವಹಿಸಿದ್ದರು.

ಟ್ರಸ್ಟಿಗಳಾದ ಶ್ರೀಮತಿ ಬಿ ಎಂ ಗಂಗಮ್ಮ, ಶ್ರೀಮತಿ ಸುಧಾ ಯಶವಂತ ಕುದುಂಗು,
ಹೇಮಂತ್ ಕುಮಾರ್ ಕಂಬಳ, ದಾಸ್ ಪ್ರಕಾಶ್ ಕಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೋಹಿತ್ ಕಂಬಳ ಸ್ವಾಗತಿಸಿದರು. ಶಿಕ್ಷಕಿ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.
ದೇವಿಪ್ರಸಾದ್ ಎ ವಂದಿಸಿದರು.

ಪುರಸ್ಕೃತ ವಿದ್ಯಾರ್ಥಿಗಳು:
2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಭಾಗದಲ್ಲಿ ಸುಳ್ಯ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪುರಸ್ಕೃತರು ರೂ. ಹತ್ತು ಲಕ್ಷ ದ ಶಾಶ್ವತ ವಿದ್ಯಾನಿಧಿಯ ಬಡ್ಡಿ ಹಣ ಗಳಿಕೆಯನ್ನು ವಿತರಿಸಲಾಯಿತು.
ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದು ಪುರಸ್ಕಾರದ ಮೊತ್ತ ರೂ. 4700 ನ್ನು ಪಡೆದವರು ಪ್ರಜ್ಞಾಎನ್. (ಸ.ಪ್ರೌ. ಎಡಮಂಗಲ),
ಚಿನ್ಮಯ್ ಕೆ. (ಸ.ಪ್ರೌ. ಮರ್ಕಂಜ),
ಹಂಸಿಕಾ ಪಿ. ಎಸ್. (ಸ.ಪ್ರೌ. ಎಲಿಮಲೆ),ಪೂಜಾಶ್ರೀ ಯು. (ಪಿ. ಸ.ಪ್ರೌ. ಎಲಿಮಲೆ)
ಪ್ರಕೃತಿ ಡಿ. (ಸ.ಪ್ರೌ. ಶಾಲೆ ಎಡಮಂಗಲ), ಧನ್ಯಶ್ರೀ ಎನ್. (ಕೆ.ಪಿ.ಎಸ್. ಬೆಳ್ಳಾರೆ),ಶ್ರೀಲಕ್ಷ್ಮೀ ವಿ. (ಸ.ಪ್ರೌ. ಎಲಿಮಲೆ). ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಪುರಸ್ಕಾರದ ಮೊತ್ತ ರೂ 33000 ಪಡೆದವರು ಚೇತನ್ ಪ್ರಭು ಕೆ. (ಸ.ಪ್ರೌ. ಎಲಿಮಲೆ). ವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕ ಪಡೆದು ಪುರಸ್ಕಾರದ ಮೊತ್ತ ರೂ. 16000 ನ್ನು ಪಡೆದವರು.
ಶಿಷ್ಮ ಡಿ. ಎಲ್. (ಸ. ಪ್ರೌ. ಶಾಲೆ ಮರ್ಕಂಜ), ಲಿಖಿತ್ ಎಸ್. (ಸ.ಪ.ಪೂ. ಕಾಲೇಜು ಐವರ್ನಾಡು).
2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಭಾಗದಲ್ಲಿ ಕಡಬ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪುರಸ್ಕೃತರು
ರೂ. 1 ಲಕ್ಷ ದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದು ಪುರಸ್ಕಾರದ ಮೊತ್ತ ರೂ. 8000ನ್ನು ಪಡೆದವರು ಅನುಷಾ ಎಂ. ಎಸ್. (ಸ.ಪ.ಪೂ. ಕಾಲೇಜು ಕಡಬ)
ಕೃಪಾ ಎಂ. ಬಿ. (ಸ.ಪ್ರೌ, ಶಾಲೆ ಮಂಜುನಾಥ ನಗರ), ಭುವನೇಶ್ವರಿ ಕೆ. (ಸ.ಪ್ರೌ. ದೋಳ್ಪಾಡಿ), ಕೃಪಾಶ್ರೀ ಕೆ. (ಸ.ಪ.ಪೂ. ಕಾಲೇಜು ಸವಣೂರು), ಗಣಿತ ವಿಷಯದಲ್ಲಿ 100ಕ್ಕೆ 99 ಅಂಕ ಪಡೆದು ಪುರಸ್ಕಾರದ ಮೊತ್ತ ರೂ. 33000 ನ್ನು ಪಡೆದವರು ಹಂಸಿಕ (ಸ.ಪ್ರೌ. ಪಡುಬೆಟ್ಟು), ವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕ ಪಡೆದು ಪುರಸ್ಕಾರದ ಮೊತ್ತ ರೂ. 33000 ನ್ನು ಪಡೆದವರು
ರಕ್ಷಾ ಸಿ. ಎ. (ಸ. ಪ.ಪೂ.ಕಾಲೇಜು ಸವಣೂರು) ಪುರಸ್ಕೃತರು. ಪಂಜ ಸ. ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡ ಸಿಂಚನಾ ಮತ್ತು ಪಂಜ ಪಿ ಯು ಸಿ
ವಾಣಿಜ್ಯ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡ ಶರಣ್ಯ ಕುಮಾರಿ, ಡ್ರಾಯಿಂಗ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಗೊಂಡ ಅನ್ವಿತಾ ಸಿ ರವರನ್ನು ಪುರಸ್ಕರಿಸಲಾಯಿತು.