ಮುರುಳ್ಯ : ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಸಭೆ

0


ಮುರುಳ್ಯ : ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಸಭೆ ನಡೆಯಿತು.


ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ದೇವಳದ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ದೇವಸ್ಯ ಸಭಾಧ್ಯಕ್ಷತೆ ವಹಿಸಿ ಪ್ರಸ್ತಾವನೆ ಮಾಡಿದರು.
ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ದೀಪ ಪ್ರಜ್ವಲನೆ ಮಾಡಿದರು.


ವೇದಿಕೆಯಲ್ಲಿದ್ದ ಮಡಿಕೇರಿಯ ಉದ್ಯಮಿ ಶಶಿಧರ ರೈ ಯವರು ತಡೆಗೋಡೆಗೆ ೩ ಲಕ್ಷ ನೀಡುವುದಾಗಿ, ಬೆಂಗಳೂರಿನ ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿಯವರು ಮೆಟ್ಟಿಲು ರಚನೆಗೆ ೪ ಲಕ್ಷ ರೂ. ನೀಡುವುದಾಗಿ, ಕಾಮಧೇನು ಗ್ರೂಪ್‌ನ ಮಾಧವ ಗೌಡರು ೧ ಲಕ್ಷ , ಮೀನಾ ಎಂಟರ್‌ಪ್ರೈಸೆಸ್ ಮಾಲಕ ಗಣೇಶ್ ಭಟ್ ೫೦ ಸಾವಿರ, ಸಭೆಯಲ್ಲಿದ್ದ ನ್ಯಾಯವಾದಿ ಜಗದೀಶ್ ಹುದೇರಿ ೧ ಲಕ್ಷ , ಒಟ್ಟಾಗಿ ೩೦ ಲಕ್ಷ ವಾಗ್ದಾನ ಮಾಡಿದರು.
ಅಕ್ಟೋಬರ್ ೧ರಂದು ಮತ್ತು ೨ ರಂದು ನವರಾತ್ರಿ ಉತ್ಸವದ ಅಂಗವಾಗಿ ದೇವಳದ ಪ್ರಧಾನ ಅರ್ಚಕ ವೇದಾಮೂರ್ತಿ ಸೂರ್ಯ ನಾರಾಯಣ ಕೆ. ರವರ ವೈಧಿಕ ಕಾರ್ಯಕ್ರಮಗಳೊಂದಿಗೆ ಆಯುಧ ಪೂಜೆ ರಂಗ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ವಾಹನ ಪೂಜೆ, ಅಕ್ಷರಾಭ್ಯಾಸ, ತೆನೆಹಬ್ಬ, ತೆನೆ ವಿತರಣೆ ನಡೆದು ನವನ್ನಾ ಭೋಜನ ಕಾರ್ಯಕ್ರಮ ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕ ಕೆ.ಜಿ. ಸೀತಾರಾಮರವರು ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ಜನಾರ್ಧನ ಅಲೆಕ್ಕಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಅನೂಪು ಬಿಳಿಮಲೆ ವಂದಿಸಿದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ