ಬಾಳುಗೋಡಿನವರಾದ, ಪ್ರಸಕ್ತ ಮಂಗಳೂರುನಲ್ಲಿ ನೆಲೆಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿರುವ, ಪ್ರಭಾರ ಕುಲಪತಿಯಾಗಿ, ಕುಲಸಚಿವರಾಗಿ ಕೆಲಸ ನಿರ್ವಹಿಸಿದ್ದ ಡಾ. ಕಿಶೋರ್ ಕುಮಾರ್ ಸಿ ಕೆ. ಅ.೫ ರ ಮುಂಜಾನೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.















ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಕಿಶೋರ್ಕುಮಾರ್ರವರು ಸುಳ್ಯ ತಾಲೂಕಿನ ಕ್ರೀಡಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸುಳ್ಯ ತಾಲೂಕಿನಲ್ಲೂ ಹಲವಾರು ಮಿತ್ರರನ್ನು, ಶಿಷ್ಯರನ್ನು ಹೊಂದಿದ್ದಾರೆ.
ಮೃತರು ತಾಯಿ ದೇವಳದೇವಿ, ಪತ್ನಿ ಅರುಣ, ಮಕ್ಕಳಾದ ದ್ಯಾನ್, ಯಶಸ್, ಸಹೋದರ ರವಿಪ್ರಸನ್ನ, ಸಹೋದರಿ ಶ್ರೀಮತಿ ಕಲ್ಪನಾ ಶೆಟ್ಯಡ್ಕ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










