ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿ ರಥ ಸಮರ್ಪಣೆಗೆ ಸಿದ್ಧತೆ ನಡೆಸುತ್ತಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ `ಬಿ’ ಕಮಿಟಿ ಅಧ್ಯಕ್ಷ ಡಾ| ಕೆ.ವಿ.ರೇಣುಕಾಪ್ರಸಾದ್ ಮತ್ತು ಮನೆಯವರು ಸುಳ್ಯ ಸೀಮೆ ದೇವಸ್ಥಾನವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಮೂಲ ಲಿಂಗಕ್ಕೆ ಚಿನ್ನದ ತ್ರಿನೇತ್ರ ಹಾಗೂ ಬೆಳ್ಳಿಯ ಕವಚವನ್ನು ಅ.೭ರಂದು ಸಮರ್ಪಿಸಿದರು.















ಮಧ್ಯಾಹ್ನ ೧೨ ರ ಸುಮಾರಿಗೆ ಡಾ| ರೇಣುಕಾಪ್ರಸಾದ್ ಕೆ.ವಿ., ಡಾ| ಜ್ಯೋತಿ ರೇಣುಕಾಪ್ರಸಾದ್, ಡಾ| ಅಭಿಜ್ಞಾ, ಮೌರ್ಯ ಆರ್. ಪ್ರಸಾದ್‌ರವರು ಚಿನ್ನದ ತ್ರಿನೇತ್ರ ಹಾಗೂ ಬೆಳ್ಳಿಯ ಕವಚದೊಂದಿಗೆ ಕ್ಷೇತ್ರಕ್ಕೆ ಆಗಮಿಸಿದರು. ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ಸದಸ್ಯರು, ಊರವರಿದ್ದು, ಸ್ವಾಗತಿಸಿ, ಬ್ಯಾಂಡ್ ವಾಲಗದೊಂದಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚ ಕೈಯಲ್ಲಿಡಿದು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದ ಡಾ| ಆರ್.ಪಿ. ಹಾಗೂ ಮನೆಯವರು ಮಧ್ಯಾಹ್ನದ ಪೂಜೆಯ ಮೊದಲು ದೇವರೆದುರು ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಸರ್ಮಪಿಸಿದರು. ಬಳಿಕ ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚವನ್ನು ಮೂಲಲಿಂಗಕ್ಕೆ ಇಟ್ಟು ಮಧ್ಯಾಹ್ನದ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ನ.ಪಂ. ಮಾಜಿ ಅಧ್ಯಕ್ಷರುಗಳಾದ ಎನ್.ಎ. ರಾಮಚಂದ್ರ, ಎಂ.ವೆಂಕಪ್ಪ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಪ್ರಮುಖರಾದ ಪಿ.ಬಿ.ಸುಧಾಕರ ರೈ, ಕಿಶೋರ್ ಕುಮಾರ್ ಉಳುವಾರು, ಸಂತೋಷ್ ಕುತ್ತಮೊಟ್ಟೆ, ಪಿ.ಸಿ.ಜಯರಾಮ, ಶಿವರಾಮ ಕೇರ್ಪಳ, ಭಾಸ್ಕರ ಗೌಡ ಕುರುಂಜಿ, ದಿನೇಶ್ ಮಡಪ್ಪಾಡಿ, ಧನಂಜಯ ಅಡ್ಪಂಗಾಯ, ಧನಂಜಯ ಕಲ್ಲುಗದ್ದೆ, ಸೋಮಶೇಖರ್ ಪೈಕ, ತೀರ್ಥರಾಮ ಅಡ್ಕಬಳೆ, ವಸಂತ ಕಿರಿಭಾಗ, ಕುಶಾಲಪ್ಪ ಪೆರುವಾಜೆ, ಎಸ್.ಆರ್ ಸೂರಯ್ಯ, ಕೆ.ಸಿ.ಸದಾನಂದ, ಕಾಮಧೇನು ಮಾಧವ ಗೌಡ, ಮುಗುಪ್ಪು ಕೂಸಪ್ಪ ಗೌಡ, ಕಿಟ್ಟಣ್ಣ ರೈ ಮೇನಾಲ, ವೆಂಕಟ್ ದಂಬೆಕೋಡಿ, ಭವಾನಿಶಂಕರ್ ಅಡ್ತಲೆ, ಅಶೋಕ್ ಪೀಚೆ, ಬೂಡು ರಾಧಾಕೃಷ್ಣ ರೈ, ಗೀತಾ ಶೇಖರ್, ಚಂದ್ರಶೇಖರ ನಂಜೆ, ವಾರಿಜ ಕುರುಂಜಿ, ದಿನೇಶ್ ಮಡ್ತಿಲ, ದೊಡ್ಡಣ್ಣ ಬರೆಮೇಲು, ಜಾಕೆ ಮಾಧವ ಗೌಡ, ಜಾಕೆ ಸಂತೋಷ್, ರಮಾನಂದ ಬಾಳೆಕಜೆ, ಗಿರೀಶ ಕಲ್ಲುಗದ್ದೆ, ವೆಂಕಟ್ರಮಣ ಪೆತ್ತಾಜೆ, ದಯಾನಂದ ಕುರುಂಜಿ, ನಾಗಪ್ಪ ಗೌಡ ಬಾಳೆಕಜೆ, ರಾಮಚಂದ್ರ ಕಲ್ಲುಗದ್ದೆ, ಎನ್.ಎ. ಜಿತೇಂದ್ರ, ತೀರ್ಥರಾಮ ಪರ್ನೋಜಿ, ಆರ್.ಐ. ಅವಿನ್ ರಂಗತ್ತಮಲೆ, ಕೇಶವ ಅಡ್ತಲೆ, ನಾರಾಯಣ ಕೇಕಡ್ಕ, ಸುನಿಲ್‌ಕೇರ್ಪಳ, ಭಾರತಿ ಉಳುವಾರು, ಮೋಹನ್ ರಾಂ ಸುಳ್ಳಿ, ವಸಂತ ಪೆಲ್ತಡ್ಕ, ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮೊದಲಾದವರು ಭಾಗವಹಿಸಿದ್ದರು.










