ಸುಳ್ಯ ದಸರಾ ಶೋಭಾಯಾತ್ರೆಗೆ ಚಾಲನೆ

0

9 ದಿನಗಳ ಕಾಲ ಸುಳ್ಯದ ಚೆನ್ನಕೇಶವ ಮುಂಭಾಗದ ಶಾರದಾಂಬ ಕಲಾ ವೇದಿಕೆಯಲ್ಲಿ ನಡೆದ ಸುಳ್ಯ ದಸರಾ ಉತ್ಸವ ಶೋಭಾಯಾತ್ರೆ ಗೆ ಚಾಲನೆ ದೊರೆತಿದೆ.

ಶಾಸಕಿ‌ ಭಾಗೀರಥಿ ಮುರುಳ್ಯ ಶೋಭಾಯಾತ್ರೆ ಗೆ ಚಾಲನೆ ನೀಡಿದರು. ತಹಶೀಲ್ದಾರ್ ಮಂಜುಳಾ ಸಹಿತ ಸುಳ್ಯ ದಸರಾ, ಎಸ್.ಸಿಕ್ಸ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಶೋಭಾಯಾತ್ರೆ ಯು ಸುಳ್ಯ ಕೆ.ವಿ.ಜಿ. ಜಂಕ್ಷನ್, ಮೆಸ್ಕಾಂ ರಸ್ತೆ, ಜೂನಿಯರ್ ಕಾಲೇಜ್ ರಸ್ತೆ, ಶ್ರೀರಾಮ ಪೇಟೆ, ಹಳೆಗೇಟು ಹೋಗಿ ಅಲ್ಲಿಂದ ಹಿಂತಿರುಗಿ ಸುಳ್ಯ‌ ಪೇಟೆಯಾಗಿ ಗಾಂಧಿನಗರಕ್ಕೆ ಹೋಗಿ ವಿಷ್ಣು ಸರ್ಕಲ್ ಬಳಿಯಿಂದ ತಿರುಗಿ ರಥಬೀದಿ ರಸ್ತೆಯಾಗಿ ಸಾಗಿ ಪಯಸ್ವಿನಿ ನದಿಯಲ್ಲಿ ದೇವಿಯ ಜಲಸ್ತಂಭನ ನಡೆಯುವುದು.