ಸಂಜೀವಿನಿ ಸಂಘದ ಮೂಲಕ ಕ್ಯಾಂಟೀನ್ ತೆರೆದ ವಿಶೇಷ ಚೇತನ ಸದಸ್ಯ

0

ಬೆಳ್ಳಾರೆಯ ಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಚೈತನ್ಯ ವಿಶೇಷ ಚೇತನರ ಸಂಘದ ಸದಸ್ಯ ಜಯ ಪ್ರಕಾಂತ್ ರಾಜ್ ಇವರು ಸ್ವ ಉದ್ಯೋಗ ನಡೆಸುವ ಉದ್ದೇಶಕ್ಕಾಗಿ ಸಂಜೀವಿನಿ ಸಂಘದ ಮುಖಾಂತರ ಸಮುದಾಯ ಬಂಡವಾಳ ನಿಧಿ ಪಡೆದು ಬೆಳ್ಳಾರೆ ಬಸ್ ಸ್ಟ್ಯಾಂಡ್ ಬಳಿ ಜೆ.ಪಿ. ಫಾಸ್ಟ್ ಪುಡ್ ಹೆಸರಿನಲ್ಲಿ ನೂತನ ಕ್ಯಾಂಟೀನ್ ಆರಂಭಿಸಿದ್ದಾರೆ.
ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಮೂಲ್ಯ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿಯ ಎನ್ ಆರ್ ಎಲ್ ಎಂ ನ ಬ್ಲಾಕ್ ಮ್ಯಾನೇಜರ್ ಶ್ರೀಮತಿ ಮೇರಿ, ವಲಯ ಮೇಲ್ವಿಚಾರಕ ಅವಿನಾಶ್, ಒಕ್ಕೂಟದ ಸಿಬ್ಬಂದಿಗಳಾದ ಎಲ್ ಸಿ ಆರ್ ಪಿ ಯವರು, ಪಶು ಸಖಿ, ಒಕ್ಕೂಟದ ಪದಾಧಿಕಾರಿಗಳು, ಹಾಗೂ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.