ಸುಳ್ಯ ಶ್ರೀ ಶಾರದಾಂಬ ಶೋಭಾಯಾತ್ರೆಗೆ ಪುತ್ತೂರು ಡಿ ವೈ ಎಸ್ ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್

0

ಡಿವೈಎಸ್ಪಿ ಅರುಣ್ ನಾಗೇಗೌಡ ಉಪಸ್ಥಿತಿ

ಸುಳ್ಯ ಶ್ರೀ ಶಾರದಾಂಬ ಶೋಭಾ ಯಾತ್ರೆಗೆ ಪೊಲೀಸ್ ಇಲಾಖೆಯಿಂದ ಉತ್ತಮ ಬಂದೋಬಸ್ತ್ ಆಯೋಜಿಸಲಾಗಿತ್ತು.

ಪುತ್ತೂರು ಪೊಲೀಸ್ ಉಪವಿಭಾಗಾಧಿಕಾರಿ ಅರುಣ್ ನಾಗೇಗೌಡ ರವರ ನೇತೃತ್ವದಲ್ಲಿ ಸುಳ್ಯ ವೃತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ರವರು ಹಾಗೂ ಸುಳ್ಯ ಸರ್ಕಲ್ ವ್ಯಾಪ್ತಿಯ ಸುಬ್ರಹ್ಮಣ್ಯ, ಸುಳ್ಯ ಬೆಳ್ಳಾರೆ ಠಾಣೆಯ ಉಪನಿರೀಕ್ಷಕರುಗಳು ಉಪಸ್ಥಿತರಿದ್ದರು.

ಅಲ್ಲದೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ಥಿನಲ್ಲಿ ಭಾಗವಹಿಸಿದ್ದು ಪುತ್ತೂರು ನಗರ, ಪುತ್ತೂರು ಸಂಚಾರಿ ಠಾಣೆ, ಸಂಪ್ಯ, ಕಡಬ ಠಾಣೆಗಳ ಸಿಬ್ಬಂದಿಗಳು ಮತ್ತು ಒಂದು ಕೆ ಎಸ್ ಪಿ ತುಕಡಿ,ಒಂದು ಡಿ ಆರ್ ತುಕಡಿಯನ್ನು ಶಾಂತಿ ವ್ಯವಸ್ಥೆಯನ್ನು ಕಾಪಾಡಲು ನಿಯೋಜಿಸಲಾಗಿತ್ತು.