ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಅ.9 ರ 10.30 ಸಮಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ ಸಭೆ ಕರೆದಿದ್ದು ರೈತರು ಭಾಗವಹಿಸುವಂತೆ ಕೋರಲಾಗಿದೆ.















ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಟಿಂಗ್ ಆಗದ ಜಾಗವನ್ನು ಕಾಡಿನ ಅಂಚಿನಲ್ಲಿ ಇರುವ ರೈತನ ಭೂಮಿ ಆರ್ ಟಿ ಸಿ ಯಲ್ಲಿ ಭಾಗಶಃ ಅರಣ್ಯ ಎಂದು ನಮೋಧಿಸಿರುವ ಇಲಾಖೆಗಳು ನೂರಾರು ವರುಷದಿಂದ ಹಕ್ಕು ಪತ್ರ ಪಡೆದು.ಕೃಷಿ ಮನೆ ನಿವೇಶನ ಇದ್ದರು ಕೋರ್ಟಿಗೆ ಅರಣ್ಯ ಇಲಾಖೆ ತನ್ನದೇ ಆದ ಸೃಷ್ಟಿ ಮಾಡಿದ ದಾಖಲಾತಿ ನೀಡಿ ಒಕ್ಕಲೆಬ್ಬಿಸುವ ಕಾರ್ಯ ಚಟುವಟಿಕೆಯಲ್ಲಿ ಅರಣ್ಯ ಇಲಾಖೆಯು ತೊಡಗಿಸಿಕೊಂಡಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ 75% ಕೃಷಿಭೂಮಿಯನ್ನು ರೈತರು ಕಳೆದುಕೊಳ್ಳಬೇಕಾಗುತ್ತದೆ ಇದರ ಬಗ್ಗೆ ಮಲೆನಾಡು ಜನಹಿತರಕ್ಷಣಾ ವೇದಿಕೆ ಹೋರಾಟದ ರೂಪುರೇಷೆ ಸಿದ್ದಪಡಿಸಲು ಸಿದ್ದವಾಗಿದೆ.
ಈ ನಿಟ್ಟಿನಲ್ಲಿ ರೈತರ ರಕ್ಷಣೆಗಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯು ಜನಪ್ರತಿನಿಧಿಗಳನ್ನು ವಿವಿಧ ಸಂಘ ಸಂಸ್ಥೆಯ ಮುಖಂಡರನ್ನು.ಧಾರ್ಮಿಕ ಮುಖಂಡರನ್ನು. ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ರೈತರ ರಕ್ಷಣೆಗೆ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಸಭೆಯನ್ನು ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.










