ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಜನತಾ, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿ ಹೇಮಂತ್ ಕಾಮತ್
400 ಅಜೀವ ಸದಸ್ಯತ್ವ ಮಾಡುವಲ್ಲಿ ನಮ್ಮ ಗುರಿ ತಲುಪಿದೆ: ಸುಧಾಕರ ರೈ
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿ ಗಳ ಸಂಘ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸುಳ್ಯ ವರ್ತಕ ಸಮುದಾಯ ಭವನದಲ್ಲಿ ನಡೆಯಿತು.
ಆ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಕಾರ್ಯಕಾರಿ ಸಮಿತಿಗೆ ೨೧ ಸದಸ್ಯರನ್ನು ಆಯ್ಕೆ ಮಾಡಲಾಯಿತು.















ಅ.೬ ರಂದು ಸುಳ್ಯ ಅರಂಬೂರಿನ ರಸಪಾಕ ರೆಸ್ಟೋರೆಂಟ್ ನಲ್ಲಿ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯಲ್ಲಿ ನೂತನ ಆಡಳಿತ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಪಿ ಬಿ ಸುಧಾಕರ ರೈ ನೆಟ್ ಕಾಂ , ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಜನತಾ
ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಭಗವತಿ ಹಾರ್ಡ್ವೇರ್, ಕೋಶಾಧಿಕಾರಿಯಾಗಿ ಹೇಮಂತ್ ಕಾಮತ್ ಅರಂಬೂರು ಉಪಾಧ್ಯಕ್ಷರುಗಳಾಗಿ
ಸಿಎ ಗಣೇಶ್ ಭಟ್ ,ಪ್ರಭಾಕರನ್ ನಾಯರ್, ಮಂಜುನಾಥ ರೈ, ಆದಮ್ ಹಾಜಿ ಕಮ್ಮಾಡಿ, ಡಿ ಎಸ್ ಗಿರೀಶ್
ಜೊತೆ ಕಾರ್ಯದರ್ಶಿಗಳಾಗಿ ಜಗನ್ನಾಥ ರೈ ಪಿ, ಅಬ್ದುಲ್ ರಹಿಮಾನ್ ಸಂಗಂ
ನಿರ್ದೇಶಕರುಗಳಾಗಿ ಎಂ ಸುಂದರೇಶ್ ಭಟ್ ಜಾಲ್ಸೂರ್, ಎಂ ಸುಂದರ ರಾವ್ ರೂಪಾ, ಶ್ಯಾಮ್ ಪ್ರಸಾದ್ ಎ ಡಿ, ಅಬ್ದುಲ್ಲಾ ಹಾಜಿ ಕಟ್ಟೆ ಕಾರ್, ಸಾಂಗ್ ಸಿಂಗ್, ಅಬ್ದುಲ್ ಮಜೀದ್ ಜನತಾ, ಇಬ್ರಾಹಿಂ ಕಡಿಕಡ್ಕ, ಕಸ್ತೂರಿ ಶಂಕರ್ ನಿಸರ್ಗ, ಪ್ರಭಾಕರ ಬಿ ಪಿ, ವಿನಯ್ ಕುಮಾರ್ ಕಂಡಡ್ಕ ಆಯ್ಕೆಯಾದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಧಾಕರ ರೈ ನೂತನ ಪಧಾದಿಕಾರಿಗಳಿಗೆ ಶುಭ ಹಾರೈಸಿ ಮಾತನಾಡಿ ಕಳೆದ ೧೪ ವರ್ಷಗಳಿಂದ ಸುಳ್ಯದಲ್ಲಿ ನಿರಂತರ ವರ್ತಕರ ಜೊತೆ ಬೆರೆತು ಸುಳ್ಯದಲ್ಲಿ ವರ್ತಕರ ಭವನದ ನಿವೇಶನ, ವರ್ತಕರ ಭವನದ ಕಟ್ಟಡ, ಅದರ ಜೊತೆಯಲ್ಲಿ ಭೋಜನ ಶಾಲೆ ಸೇರಿದಂತೆ ಒಂದು ಕೋಟಿಗೂ ಅಧಿಕ ಮೊತ್ತದ ಅಸ್ತಿಯನ್ನು ಹೊಂದಿದ ವರ್ತಕ ಸಂಘವಾಗಿದೆ.
೪೦೦ ಅಜೀವ ಸದಸ್ಯರನ್ನು ನೊಂದಾಯಿಸಿ ಒಂದು ಉತ್ತಮ ಸಂಘವಾಗಿ ರೂಪಿಕರಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದ್ದೇವೆ ಮುಂದೆಯೂ ಎಲ್ಲಾ ವರ್ತಕರು ಸೇರಿ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಬೇಕು ನಮ್ಮ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬ ವರ್ತಕ ಬಂಧುಗಳಿಗೂ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತೇವೆ ಎಂದು ಹೇಳಿದರು.










