














ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳಲ್ಲಿ ತೆರವಾಗಿರುವ ಒಟ್ಟು 7 ಅಂಗನವಾಡಿ ಕಾರ್ಯಕರ್ತೆ ಹಾಗೂ 18 ಅಂಗನವಾಡಿ ಸಹಾಯಕಿಯರ ಗೌರವಧನ ಸೇವೆಗಳ ಹುದ್ದೆಗೆ ಅನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 20.10.2025ರವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ 75 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಅವುಗಳು ಪರಿಶೀಲನೆಗೆ ಲಭ್ಯವಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 3 ಹಂತಗಳನ್ನು ಪೂರ್ಣಗೊಳಿಸಿದ್ದಲ್ಲಿ ಮಾತ್ರ ಅರ್ಜಿಗಳು ಪರಿಶೀಲನೆಗೆ ಲಭ್ಯವಾಗುತ್ತದೆ. ಪ್ರತಿ ಹಂತ ಪೂರ್ಣಗೊಂಡಾಗ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ 1ನೇ ಹಂತ, 2ನೇ ಹಂತ, 3ನೇ ಹಂತ ಪೂರ್ಣಗೊಂಡಿರುವ ಬಗ್ಗೆ ಮೆಸೇಜ್ ರವಾನಿಸಲ್ಪಡುತ್ತದೆ. ಹೆಚ್ಚಿನ ಮಾಹಿತಿಯನ್ನು ಮೆಸ್ಕಾಂ ಕಛೇರಿಯ ಬಳಿ ಸ್ತ್ರೀಶಕ್ತಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳ್ಯ ಶಿಶು ಅಭಿವೃದ್ಧಿ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಿ.ಡಿ.ಪಿ.ಒ ತಿಳಿಸಿರುತ್ತಾರೆ.










