ದಾಸರಬೈಲನಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಯುಕ್ತ ಮಂಡಳಿ (ರಿ.) ಸುಳ್ಯ.ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ 2025 75 ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸತೀಶ್ ರಾವ್ ದಾಸರಾಬೈಲು ಇವರು ದೀಪ ಬೆಳಗುವುದರ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ನಿತೀಶ್ ಎರ್ಮೆಟ್ಟಿ ಸ್ವಚ್ಛತೆಯ ಬಗ್ಗೆ ಸಲಹೆ ಮತ್ತು ಮಾಹಿತಿ ನೀಡಿದರು. ಯುವಶಕ್ತಿ ಮಿತ್ರ ಬಳಗದ ಅಧ್ಯಕ್ಷರಾದ ದಯಾನಂದ ದಾಸರಬೈಲು ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರಗಳು ಭಾಗವಹಿಸಿದರು. ದಾಸರಾಬೈಲು ಅಂಬೇಡ್ಕರ್ ಸಭಾಭವನದ ಸುತ್ತಮುತ್ತಲು ಸ್ವಚ್ಛತೆ ಕಾರ್ಯ ನಡೆಯಿತು. 75 ದಿನಗಳ ನಿರಂತರವಾಗಿ ಸ್ವಚ್ಛತಾ ಆಂದೋಲನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.