ಮಂಡೆಕೋಲು : 21ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡೆಕೋಲು ಗ್ರಾಮದ ನಾಲ್ಕು ಒಕ್ಕೂಟಗಳಾದ ಮಂಡಕೋಲು, ಕಲ್ಲಡ್ಕ, ಪೇರಾಲು ಹಾಗೂ ಪೇರಾಲು ಎ ಒಕ್ಕೂಟಗಳ ವತಿಯಿಂದ ನಡೆಯುವ ಇಪ್ಪತ್ತೊಂದನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಇದೇ ಬರುವ ಒಕ್ಟೋಬರ್ 26ನೇ ತಾರೀಕಿನಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೇಂದ್ರ‌ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು.ಇದೇ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ವೇಧಿಕೆಯಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವರಾಮ ಕೇನಾಜೆ, ವಲಯ ಮೇಲ್ವಿಚಾರಕರಾದ ಅನಿತಾ ಉಪಸ್ಥಿತರಿದ್ದರು.


ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಚಂದ್ರಶೇಖರ ಪೆರಾಜೆ, ಭಜನಾ ಪರಿಷತ್‌ ವಲಯಾಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಸೊಸೈಟಿ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಭಜನಾ ಪರಿಷತ್ ಮಾಜಿ ಸದಸ್ಯರಾದ ಬುದ್ದನಾಯ್ಕ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ, ಒಕ್ಕೂಟ ಅಧ್ಯಕ್ಷರುಗಳಾದ ಭವಾನಿಶಂಕರ್, ಪ್ರವೀಣ್ ಪೇರಾಲು, ನವೀನ್ ಯಾವಟೆ, ರಾಮಚಂದ್ರ ಮಣಿಯಾಣಿ, ಗುರುಪ್ರಸಾದ್, ಮಾಜಿ ಗ್ರಾ.ಪಂ‌ ಅಧ್ಯಕ್ಷೆ ಮೋಹಿನಿ ಬಿ, ಸೇವಾಪ್ರತಿನಿಧಿಗಳು, ವಿ.ಎಲ್.ಎ ಗಳು ಇನ್ನಿತರರು ಉಪಸ್ಥಿತಿದ್ದರು.