















ಯುವಜನ ಸಂಯುಕ್ತ ಮಂಡಳಿ ರಿ ಸುಳ್ಯ ಇದರ ಪಂಚಸಪ್ತತಿ 2025ರ ಸ್ವಚ್ಚತಾ ಅಭಿಯಾನದ ಮೊದಲ ದಿನವಾದ ಇಂದು ಅಕ್ಷಯ ಯುವಕ ಮಂಡಲ ರಿ ನೆಟ್ಟಾರು ಇದರ ವತಿಯಿಂದ ನೆಟ್ಟಾರು ಬಸ್ ತಂಗುದಾಣ ಸುತ್ತಮುತ್ತ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು. ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ದೇವದಾಸ್ ನೆಟ್ಟಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ನೆಟ್ಟಾರು, ನೆಟ್ಟಾರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ನೆಟ್ಟಾರು, ಯುವಕ ಮಂಡಲದ ಕೋಶಾಧಿಕಾರಿ ಚಂದ್ರಶೇಖರ ಮೊಗಪ್ಪೆ, ಸದಸ್ಯರಾದ ವೆಂಕಟರಮಣ ನೆಟ್ಟಾರು, ಪ್ರವೀಣ್ ಚಾವಡಿ ಬಾಗಿಲು, ಲೋಕೇಶ್ ನೆಟ್ಟಾರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶೈಲೇಶ್ ನೆಟ್ಟಾರು ಸ್ವಾಗತಿಸಿ, ಧನ್ಯವಾದವಿತ್ತರು.










