ಸುಳ್ಯ: ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಕಾರುಣ್ಯ ಸೇವಾ ಪ್ರಶಸ್ತಿ 2025 ‘ಪುರಸ್ಕಾರ ಸಮಾರಂಭಕ್ಕೆ ಪೂರ್ವಭಾವಿ ಸಿದ್ಧತೆ

0

ಇದೇ ಬರುವ ನವಂಬರ್ ತಿಂಗಳಿನಲ್ಲಿ ಸಜ್ಜುಗೊಳ್ಳಲಿದೆ ಪ್ರಶಸ್ತಿ ಪ್ರದಾನ ವೇದಿಕೆ : ಆರ್.ಬಿ. ಬಶೀರ್

ಸುಳ್ಯ ಭಾಗದಲ್ಲಿ ಬಡವರ, ಹಾಗೂ ಬಡ ರೋಗಿಗಳ ಆಶಾಕಿರಣವಾಗಿ ವಿವಿಧ ಸಮಾಜ ಸೇವೆಗಳ ಮೂಲಕ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸುಳ್ಳದ ಜನತೆಯ ಪ್ರಶಂಸೆಗೆ ಪಾತ್ರವಾಗಿರುವ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ (ರಿ) ಪೈಚಾರ್ ಸುಳ್ಯ ಇದರ ವತಿಯಿಂದ, ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಕಾರುಣ್ಯ ಸೇವಾ ಪ್ರಶಸ್ತಿ2025’ ಪುರಸ್ಕಾರ ಸಮಾರಂಭ ಇದೇ ಬರುವ ನವೆಂಬರ್ ತಿಂಗಳಲ್ಲಿ ನಡೆಸುವ ಮೂಲಕ ವಿವಿಧ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಸಮಾರಂಭವು ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಆರ್ ಬಿ ಬಶೀರ್ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರ, ಕ್ರೀಡಾಕ್ಷೇತ್ರ, ವೈದ್ಯಕೀಯ, ಸಾಮಾಜಿಕ, ಮಾಧ್ಯಮ, ಶಿಕ್ಷಕ, ಕೃಷಿ, ಸೇವಾ ಸಂಘಟನಾ ಕ್ಷೇತ್ರ, ಕೈಗಾರಿಕೋದ್ಯಮ, ಯೂತ್ ಐಕಾನ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಉದಾತ್ತ ಸೇವೆಯನ್ನು ನೀಡಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಂತವರಿಗೆ ಅದ್ದೂರಿಯಾಗಿ ‘ಕಾರುಣ್ಯ ಸೇವಾ ಪ್ರಶಸ್ತಿ2025’ ಅನ್ನು ನೀಡಲಿದ್ದೇವೆ. ಹಾಗೂ
ಈ ಸಮಾರಂಭದಲ್ಲಿ ಗಣ್ಯಾತಿ ಗಣ್ಯರುಗಳು ಆಗಮಿಸಲಿದ್ದು ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಕಾರ್ಯಕ್ರಮದ ಕುರಿತು ಮಾತನಾಡಿದ್ದಾರೆ.