














ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಯುವಕ ಮಂಡಲ ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 (75 ದಿನಗಳ ಸ್ವಚ್ಛತಾ ಅಭಿಯಾನ) ಇಂದು ಬೆಳಿಗ್ಗೆ ಚಾಲನೆಗೊಂಡಿತು.
ಮಡಪ್ಪಾಡಿ ಪೇಟೆಯ ಸಾರ್ವಜನಿಕ ಶೌಚಾಲಯ ಹಾಗೂ ಸ್ನಾನಗೃಹ ಹಾಗೂ ಇದರ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ, ಕಾರ್ಯದರ್ಶಿ ರಕ್ಷೀತ್ ಶೀರಡ್ಕ, ಮಡಪ್ಪಾಡಿ ಯುವಕ ಮಂಡಲದ ಪೂರ್ವಾದ್ಯಕ್ಷರಾದ ವಿನಯಕುಮಾರ್ ಮುಳುಗಾಡು, ಸಚಿನ್ ಬಳ್ಳಡ್ಕ, ಕರುಣಾಕರ ಪಾರೆಪ್ಪಾಡಿ, ಧನ್ಯಕುಮಾರ್ ದೇರುಮಜಲು, ಯುವಕ ಮಂಡಲದ ಸದಸ್ಯರಾದ ವಿನ್ಯಾಸ್ ಪಾರೆಮಜಲು, ಪ್ರೇಕ್ಷಿತ್ ಬೊಮ್ಮೆಟ್ಟಿ, ರಂಜಿತ್ ಬೊಮ್ಮೆಟ್ಟಿ, ಹರ್ಷ ಪಾರೆಮಜಲು, ಪ್ರದೀಪ್ ಪಣಿಯಾಲ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಲೋಹಿತ್ ಬಾಳಿಕಳ, ಮಡಪ್ಪಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸದಾನಂದ ಬಲ್ಕಜೆ ಹಾಗೂ ಚಂದ್ರಶೇಖರ ಗೋಳ್ಯಾಡಿ, ನಿತ್ಯಾನಂದ ನೂಜಾಲ ಹಾಗೂ ಯುವಕ ಮಂಡಲದ ಎಲ್ಲಾ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.










