ಬಡ ಕುಟುಂಬದ ಮಹಿಳೆಯ ಚಿಕಿತ್ಸೆಗಾಗಿ ಕೊಡುಗೆ















ಸುಬ್ರಹ್ಮಣ್ಯ ದ ಕುಕ್ಕೆಶ್ರೀ ಸರ್ಕಲ್ ತಂಡ ನವರಾತ್ರಿ ಸಂದರ್ಭ ಎರಡು ದಿನ ಸಿಂಹ ಕುಣಿತದ ಮೂಲಕ ನಿಧಿ ಸಂಗ್ರಹಿಸಿ ನರ ಸಂಬಂಧಿತ ಸಮಸ್ಯೆ ಯಿಂದ ಬಳಲುತಿದ್ದ ಮಹಿಳೆಗೆ ಚಿಕಿತ್ಸಾ ವೆಚ್ಚ ನೀಡಿ ಮಾನವೀಯ ಕಾರ್ಯ ಮಾಡಿದ್ದಾರೆ.

ಸೆ.27 ಮತ್ತು ಸೆ. 28 ರಂದು ಸಿಂಹ ಕುಣಿತ ಮಾಡಿದ ತಂಡ ₹.36,961
ನ್ ಸಂಗ್ರಹಿಸಿ ಅದನ್ನು ಬಿಳಿನೆಲೆ ಗ್ರಾಮದ ಕೈಕಂಬ ಕುಕ್ಕಾಜೆ ನಿವಾಸಿಯಾದ ಬಡ ಕುಟುಂಬ ದ ಆಟೋ ಚಾಲಕರಾಗಿರುವ ಕುಶಾಲಪ್ಪ ರವರ ತಾಯಿ ತಿರುಮಲೇಶ್ವರಿಯವರಿಗೆ ಅ. 7 ರಂದು ನೀಡಿದ್ದಾರೆ. ಅವರು ಕಳೆದ ಕೆಲ ದಿನಗಳಿಂದ ತಲೆಯಲ್ಲಿ ನರ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗುತ್ತಿದ್ದಾರೆ, ಈಗಾಗಲೇ ಆಸ್ಪತ್ರೆ ವೆಚ್ಚ ಒಂದು ಲಕ್ಷ ದಾಟಿದ್ದು ಮುಂದಿನ ದಿನಗಳಲ್ಲಿ ಎರಡು ಲಕ್ಷದಷ್ಟು ವೈದ್ಯಕೀಯ ಖರ್ಚಾಗುವ ಸಾಧ್ಯತೆ ಇರುವ ಉದ್ದೇಶದಿಂದ ಕುಕ್ಕೆಶ್ರೀ ಸರ್ಕಲ್ ತಂಡ ಹಣ ಸಂಗ್ರಹಿಸಿ ನೀಡಿದೆ.










