ಕೂತ್ಕುಂಜ ಶಿವಾಜಿ ಯುವಕ ಮಂಡಲ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಕೂತ್ಕುಂಜ ಶಿವಾಜಿ ಯುವಕ ಮಂಡಲ(ರಿ ) ಇದರ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ- 2025.
75 ದಿನಗಳ ಸ್ವಚ್ಚತಾ ಅಭಿಯಾನಕ್ಕೆ ಅ.10 ರಂದು ಸಂಜೆ ಕೂತ್ಕುಂಜ ಗ್ರಾಮದ ಅಡ್ಡತ್ತೋಡು ಸೇತುವೆ ಮೇಲೆ ಮತ್ತು ಪರಿಸರ ಸ್ವಚ್ಛತೆ ಮಾಡುವ ಮೂಲಕ ಚಾಲನೆಯ ನೀಡಲಾಯಿತು.


ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು, ಧರ್ಮಪಾಲ ಗೌಡ ಕಕ್ಯಾನ, ಮಾಜಿ ಅಧ್ಯಕ್ಷರಾದ ಜಯರಾಮ ಕಲ್ಲಾಜೆ, ಉಜ್ವಲ್ ಚಿದ್ಗಲ್ಲು, ದೇವಿಪ್ರಸಾದ್ ಕುಳ್ಳಾಜೆ, ಆಶಿತ್ ಕಲ್ಲಾಜೆ, ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.