ಪಂಜ: ಜೈ ಕರ್ನಾಟಕ ಯುವಕ ಮಂಡಲ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಜೈ ಕರ್ಣಾಟಕ ಯುವಕ ಮಂಡಲ(ರಿ ) ಅಳ್ಪೆ ಚಿಂಗಾಣಿಗುಡ್ಡೆ, ಪಂಜ
ಇದರ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ- 2025.
75 ದಿನಗಳ ಸ್ವಚ್ಚತಾ ಅಭಿಯಾನಕ್ಕೆ ಅ.10 ರಂದು ಸಂಜೆ ಪಂಜದ ಕೃಷ್ಣನಗರದಲ್ಲಿ ಚಾಲನೆಯ ನೀಡಲಾಯಿತು.


ಕೃಷ್ಣನಗರ ಬಸ್ಸು ತಂಗುದಾಣದಲ್ಲಿ ಸ್ವಚ್ಛತೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ, ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷರಾದ ವಿದ್ಯಾನಂದ ಮೇಲ್ಮನೆ , ಕಾರ್ಯದರ್ಶಿ ಗಣೇಶ್ ಕರಿಮಜಲು, ಹಾಗೂ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಜನಾರ್ಧನ ನಾಗತೀರ್ಥ, ಮತ್ತು ಜೈ ಕರ್ನಾಟಕ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.