ಜಿಲ್ಲೆಯ ಎಲ್ಲಾ ತಾಲೂಕುಗಳ 18 ತಂಡಗಳು ಭಾಗಿ
ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳ ಪಿ.ಯು. ತಂಡಗಳ ಕಬಡ್ಡಿ ಪಂದ್ಯಾಟ ಇಂದು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯುತ್ತಿದೆ.















ಬೆಳಿಗ್ಗೆ ಪಂದ್ಯವನ್ನು ಜಿಲ್ಲಾ ಕ್ರೀಡಾ ಸಮನ್ವಯಾಧಿಕಾರಿ ಪ್ರೇಮನಾಥ ಶೆಟ್ಟಿಯವರು ಉದ್ಘಾಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು.

ಪಿ.ಯು. ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ರಾಜೇಶ್ವರಿ ಎಚ್.ಎಚ್., ಎನ್.ಎಂ.ಸಿ. ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮುಖ್ಯ ಅತಿಥಿಯಾಗಿದ್ದರು.

ಎನ್.ಎಂ.ಸಿ. ಪಿ.ಯು.ಕಾಲೇಜ್ ಪ್ರಾಂಶುಪಾಲೆ ಮಿಥಾಲಿ ರೈ, ಎನ್ನೆಂಸಿ ಪ್ರಿನ್ಸಿಪಾಲ್ ಡಾ.ರುದ್ರಕುಮಾರ್, ಎಸ್ ಸಿಕ್ಸ್ ಗೌರವಾಧ್ಯಕ್ಷ ಕೆ.ಗೋಕುಲದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ಒಂಬತ್ತು ತಾಲೂಕುಗಳ ವಿದ್ಯಾರ್ಥಿಗಳ ಒಂಬತ್ತು ತಂಡ ಹಾಗೂ ವಿದ್ಯಾರ್ಥಿನಿಯರ ಒಂಬತ್ತು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿವೆ. ಇಂದು ಸಂಜೆಯ ವರೆಗೆ ಕ್ರೀಡಾಕೂಟ ನಡೆಯಲಿದೆ.















