ರೆಂಜಾಳ: “ಪಂಚಸಪ್ತತಿ-2005” 75 ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ನಡೆಸಲ್ಪಡುವ ಪಂಚಸಪ್ತತಿ 2025 ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ವತಿಯಿಂದ ರೆಂಜಾಳ ದೇವಳದ ವಠಾರದಲ್ಲಿ ಅ.10 ರಂದು ಚಾಲನೆ ನೀಡಲಾಯಿತು.
ಶ್ರೀ ದೇವಳದ ಅನ್ನಪೂರ್ಣ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಗೌಡ ಬೇರಿಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಕಾರ್ಯದರ್ಶಿ ಸತೀಶ್ ರಾವ್ ದಾಸರಬೈಲು, ವ್ಯವಸ್ಥಾಪನ ಸಮಿತಿ ಸದಸ್ಯ ಅಣ್ಣು ಕಟ್ಟಕೋಡಿ, ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ತಾ.ಪಂ.ಮಾಜಿ ಸದಸ್ಯೆ ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ, ಗಜಾನನ ಯುವತಿ ಮಂಡಲ ಬೊಮ್ಮಾರು ಇದರ ಅಧ್ಯಕ್ಷೆ ಪ್ರತಿಮಾ ರೆಂಜಾಳ, ಶಾಸ್ತಾವು ಯುವಕ ಮಂಡಲದ ಸದಸ್ಯರು ಮತ್ತು ಗಜಾನನ ಯುವತಿ ಮಂಡಲ ಬೊಮ್ಮಾರು ಇದರ ಸದಸ್ಯೆಯರು ಉಪಸ್ಥಿತರಿದ್ದರು. ಯುವಕಮಂಡಲದ ಕಾರ್ಯದರ್ಶಿ ಪದ್ಮನಾಭ ಗೌಡ ನಿಡ್ಯಮಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಾಸ್ತಾವು ಯುವಕ ಮಂಡಲದ ಸದಸ್ಯರು ರೆಂಜಾಳ ದೇವಳದ ವಠಾರ ಮತ್ತು ದೇವಸ್ಥಾನದಿಂದ ರೆಂಜಾಳ ಕಟ್ಟೆಯ ತನಕ ರಸ್ತೆ ಬದಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು.