ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ

ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಇಂಟರ್ ನ್ಯಾಷನಲ್ ವಸ್ತ್ರ ಮಳಿಗೆ ನವೀಕರಣಗೊಂಡಿದ್ದು ಅದರ ಉದ್ಘಾಟನೆ ಅ.೧೧ರಂದು ಮುಂಜಾನೆ ನಡೆಯಿತು. ಕಟ್ಟಡದ ಮಾಲಕರಾದ ಶ್ರೀಮತಿ ಪ್ರೇಮಲತಾ ಪದ್ಮನಾಭಯ್ಯರು ವಿಸ್ತೃತ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ, ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ದ್ವಾರಕಾ ಹೋಟೆಲ್ ಮಾಲಕ ವಸಂತ್ ಭಟ್, ಸುಳ್ಯ ದ್ವಾರಕಾ ಮೆಡಿಕಲ್ ಮಾಲಕ ಕೆ.ಉಮೇಶ್ ರಾವ್, ಸುಳ್ಯ ರಾಜಶ್ರೀ ಕಾಂಪ್ಲೆಕ್ಸ್ ಮಾಲಕ ಕೆ.ಆರ್. ಕೃಷ್ಣ ರಾವ್, ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಕೆ.ಸುಧಾಕರ ರೈ., ಸುಳ್ಯ ಈಶ ಎಂಟರ್‌ಪ್ರೈಸಸ್ ಮಾಲಕ ರಾಜೇಶ್ ಶೆಟ್ಟಿ ಮೇನಾಲ, ಸುಳ್ಯ ಮಹಾದೇವ ಫ್ಲವರ್ ಮಾಲಕ ಮಾಧವ ಮಂಗಲ್ಪಾಡಿ, ಮಂಗಳಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ ಸ್ವಾತಿಕ್ ಕಿರ್ಲಾಯ, ಸುಳ್ಯ ಡಿಜಿ ಫ್ಲಸ್ ಮಾಲಕ ಚಂದ್ರಶೇಖರ ನಂಜೆ, ಎಂ.ಎಸ್. ಕನ್‌ಸ್ಟ್ರಕ್ಷನ್ ನ ಮೋನಪ್ಪ ಎನ್., ಸುಳ್ಯ ಶ್ರೀ ಆದಿಶಕ್ತಿ ಪಾರ್ಸೆಲ್ ಸರ್ವಿಸಸ್ ನ ಸದಾನಂದ ಎಂ.ಎಸ್., ಸುಳ್ಯ ಸುಮಂಗಲ ಪೂಜಾ ಸೇಲ್ಸ್‌ನ ಮಾಲಕ ಪ್ರವೀಣ್ ರಾವ್, ಜಾಲ್ಸೂರು ಕುಕ್ಕಂದೂರಿನ ವಿಜಯರತ್ನ, ಕನಕಮಜಲು ಸಂಜೀವ ಗೌಡ, ಸೇವಾಜೆ ಕಟ್ಟದಮನೆಯ ಶ್ರೀಮತಿ ಮೋಹಿನಿ, ಶ್ರೀಮತಿ ಗೀತಾ ಎಂಕೆ. ಕೊರತ್ಯಡ್ಕ, ವಿಘ್ನೇಶ್ವರ ವಿ ಕಂದಡ್ಕ, ಪಿ. ರಾಧಾಕೃಷ್ಣ ಜಯನಗರ, ಜಯಂತ್ ಹೊಸೂರು, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುದ್ದಿ ಬಿಡುಗಡೆ ಡಿಸೈನರ್ ಅನಿಲ್ ಕಳಂಜ, ನಾಗೇಶ್ ಇಂಡಸ್ಟ್ರೀಸ್ ಮಾಲಕ ನಾಗೇಶ್ ಕೇರ್ಪಳ ಮೊದಲಾದವರು ಆಗಮಿಸಿದ್ದರು. ಆಗಮಿಸಿದ ಎಲ್ಲ ಅತಿಥಿಗಳನ್ನು ಪೇಟ ಇಟ್ಟು, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
















ವಿಶೇಷ ರಿಯಾಯಿತಿ : ಉದ್ಘಾಟನೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ವಸ್ತ್ರಗಳನ್ನು ನೀಡಲಾಗುತ್ತದೆ.
ರೂ.೪೯೯ ಮೇಲಿನ ಖರೀದಿಗೆ ಖಚಿತ ಉಡುಗೊರೆ ಮತ್ತು ಲಕ್ಕಿ ಕೂಪನ್ ನೀಡಲಾಗುತ್ತಿದ್ದು ಬಹುಮಾನವನ್ನು ಗೆಲ್ಲಬಹುದಾಗಿದೆ.
ದೀಪಾವಳಿ ಹಾಗೂ ಮುಂಬರುವ ಹಬ್ಬಗಳಿಗೆ ಗ್ರಾಹಕರ ಜವುಳಿ ಖರೀದಿಗೆ ವಿಶೇಷ ಕೊಡುಗೆಗಳ ಸುರಿಮಳೆಯೊಂದಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿದೆ.
ಕುಂ..ಕುಂ.. ನಲ್ಲಿ ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ಕುಂ..ಕುಂ.. ಮಳಿಗೆಯು ಕಲ್ಪಿಸಿದೆ. ವಿಸ್ತೃತ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಸಲು ಅವಕಾಶ ಕಲ್ಪಿಸಿದೆ.

ನೇರವಾಗಿ ಪ್ಯಾಕ್ಟರಿಯಿಂದ ಖರೀದಿಸಿದ ಉಡುಪುಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ ಹೊಸ ಹೊಸ ಸಂಗ್ರಹಗಳು ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ವಿನೂತನ ಶೈಲಿಯ, ಹೊಸ ಹೊಸ ವಿನ್ಯಾಸದ ಉಡುಪುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರ ಕಣ್ಮನ ಸೆಳೆಯುತ್ತಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು, ಪುರುಷರ ಎಲ್ಲಾ ರೀತಿಯ ಉಡುಪುಗಳು ಸೇರಿದಂತೆ ಎಲ್ಲಾ ಬಗೆಯ ಉಡುಪುಗಳ ಬೃಹತ್ ಸಂಗ್ರಹವಿದೆ.










