ಪುರುಷೋತ್ತಮ ಬಳ್ಳಡ್ಕ ಹೃದಯಾಘಾತದಿಂದ ನಿಧನ

0

ಸುಳ್ಯ ಕಸಬಾ ಗ್ರಾಮದ ಸೂರ್ತಿಲ ಬಳಿ ನೆಲೆಸಿರುವ ಪುರುಷೋತ್ತಮ ಬಳ್ಳಡ್ಕರವರು ಹೃದಯಾಘಾದಿಂದ ಅ. ೧೧ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.


ಇಂದು ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ತೋಟಕ್ಕೆಂದು ತೆರಳಿದ್ದವರು ಮನೆಗೆ ಬಾರದಿದ್ದಾಗ ಅವರ ಪತ್ನಿ ಅವರನ್ನು ಹುಡುಕಿಕೊಂಡು ಹೋದರು. ಆ ಸಂದರ್ಭದಲ್ಲಿ ಅವರು ತೋಟದಲ್ಲಿ ಬಿದ್ದಿದ್ದರು. ಕೂಡಲೇ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.


ಮೃತರು ಪತ್ನಿ ಶೀಲಾವತಿ (ಜಾನಕಿ), ಪುತ್ರ ಮುಖೇಶ್, ಪುತ್ರಿ ಪ್ರೇಕ್ಷಿತಾ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.