ಗಜಾನನ ಯುವತಿ ಮಂಡಲ ಬೊಮ್ಮಾರು ಇವರಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ 2025, 75 ದಿನಗಳ ಸ್ವಚ್ಛತಾ ಅಭಿಯಾನದ ಚಾಲನೆಯನ್ನು ಶ್ರೀ ಮೂವರ್ ದೈವಸ್ಥಾನ ಬೊಮ್ಮಾರು ಇಲ್ಲಿಯ ವಠಾರದ ಪರಿಸರವನ್ನು ಸ್ವಚ್ಛ ಗೊಳಿಸುವುದರ ಮೂಲಕ ಚಾಲನೆಯನ್ನು ಗಜಾನನ ಯುವತಿ ಮಂಡಲದ ವತಿಯಿಂದ ನೀಡಲಾಯಿತು.

ಈ ಕಾರ್ಯಕ್ರಮ ದಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಹೊಸೊಳಿಕೆ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ರಾಮಕೃಷ್ಣರಾವ್ ರೆಂಜಾಳ, ಗ್ರಾಮ ಪೊಲೀಸ್ ಮತ್ತು ಗಜಾನನ ಯುವತಿ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದರು.