ಸಂಘಟನಾ ಸಮಿತಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ಕೇಶವ ಹೊಸೋಳಿಕೆ
ಸಂಘಟನಾ ಕಾರ್ಯದರ್ಶಿ ಲೋಕೇಶ್ವರ ಡಿ.ಆರ್ , ಕೋಶಾಧಿಕಾರಿ ಗಂಗಾಧರ ದಂಬೆಕೋಡಿ, ಪ್ರಭಾಕರ ಗೌಡ ಕಿರಿಬಾಗ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಂಜ ಹೋಬಳಿ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಸುವುದಾಗಿ ನಿರ್ಧರಿಸಲಾಗಿದೆ. ಈ ಬಗ್ಗೆ ಸಂಘಟನಾ ಸಮಿತಿಯನ್ನು ರಚಿಸಲಾಗಿದ್ದು ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿ ಸುಳ್ಯ ವಿಧಾನ ಸಭಾ ಸದಸ್ಯೆ ಶಾಸಕಿ ಭಾಗೀರಥಿ ಮರುಳ್ಯ, ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ವೆಂಕಟ್
ದಂಬೆಕೋಡಿ ಆಯ್ಕೆಯಾಗಿದ್ದಾರೆ.
















ಪ್ರಧಾನ ಕಾರ್ಯದರ್ಶಿಯಾಗಿ ಕೇಶವ ಹೊಸೋಳಿಕೆ, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ವರ ಡಿ.ಆರ್, ಕೋಶಾಧಿಕಾರಿಯಾಗಿ ಗಂಗಾಧರ ದಂಬೆಕೋಡಿ, ಪ್ರಭಾಕರ ಗೌಡ ಕಿರಿಬಾಗ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ವೆಂಕಟ್ ವಳಲಂಬೆ, ಮಿತ್ರದೇವ ಮಡಪ್ಪಾಡಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಭರತ್ ಮುಂಡೋಡಿ, ಎ.ವಿ. ತೀರ್ಥರಾಮ, ಪಿ.ಸಿ. ಜಯರಾಮ, ಮುಳಿಯ ಕೇಶವ ಭಟ್, ಚಂದ್ರಶೇಖರ ಭಟ್ ತಳೂರು, ಸನತ್ ಮುಳುಗಾಡು ಅವರನ್ನು ಆಯ್ಕೆ ಮಾಡಲಾಗಿದೆ.
ವೆಂಕಟ್ ದಂಬೆಕೋಡಿ ಅವರ ಅವರ ಅಧ್ಯಕ್ಷತೆಯಲ್ಲಿ ಅ.16 ರಂದು ಸಭೆ ಕರೆಯಲಾಗಿದ್ದು ಅಂದು ಇನ್ನಷ್ಟು ಸಮಿತಿ ರಚನೆ ನಡೆಯಲಿದೆ.










