ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಮಣ್ಣಿನ ಮಾದರಿ ರಚನೆ ಸ್ಪರ್ಧೆ ‘ಕ್ಲೇ ವಿಸ್ಪರ್’

0

ಮಣ್ಣಿನಲ್ಲಿ ವನ್ಯಜೀವಿಗಳ ಮಾದರಿಗಳನ್ನು ರಚಿಸಿದ ವಿದ್ಯಾರ್ಥಿಗಳು

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ‘ಕ್ಲೇ ವಿಸ್ಪರ್’ ವನ್ಯಜೀವಿಗಳ ಮಣ್ಣಿನ ಮಾದರಿ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ಭಾಗವಹಿಸಿದ ವಿದ್ಯಾರ್ಥಿಗಳು ಹುತ್ತದ ಮಣ್ಣು, ಹೊಳೆಯ ಜೇಡಿಮಣ್ಣು ಸಂಗ್ರಹಿಸಿ ತಂದು ಕಲಾತ್ಮಕವಾಗಿ ವನ್ಯಜೀವಿಗಳ ಮಣ್ಣಿನ ಮಾದರಿ ರಚಿಸಿದ್ದು ನೋಡುಗರ ಗಮನ ಸೆಳೆಯಿತು.

ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಭವ್ಯ ರಜತ್, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ, ಅರ್ಥಶಾಸ್ತ್ರ ಉಪನ್ಯಾಸಕ ವಿಷ್ಣುಪ್ರಶಾಂತ್ ಸಹಕರಿಸಿದರು.

ನೇಚರ್ ಕ್ಲಬ್ ಕಾರ್ಯದರ್ಶಿ ಅಕ್ಷತಾ, ಖಜಾಂಜಿ ಚೈತ್ರ, ಸ್ಪರ್ಧಾ ಸಮಿತಿ ಸದಸ್ಯರಾದ ಕೀರ್ತಿಕ ಯು ಎಸ್, ಶ್ರೀಶ್ಮ, ವಿಜಯಲಕ್ಷ್ಮಿ ಇನ್ನಿತರರು ಸ್ಪರ್ಧೆಯನ್ನು ಆಯೋಜಿಸಿದ್ದರು. ಜೀವವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ, ಕೃತಿಕಾ ಕೆ ಜೆ, ಪಲ್ಲವಿ ಕೆ ಎಸ್, ಜಿತೇಶ್, ಅಭಿಜ್ಞಾ ಮತ್ತು ಭಾವನಾ ಮಾರ್ಗದರ್ಶನ ನೀಡಿದರು.

ನೇಚರ್ ಕ್ಲಬ್ ನ ಸದಸ್ಯರಾದ ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.