ಇಡೀ ಊರಿಗೆ ತಾಯಿ ಪ್ರೀತಿ ಉಣಬಡಿಸಿದ್ದರು : ಉಮೇಶ್ ಕೆ.ಎಂ.ಬಿ
ಮಾತೃಹೃದಯದ ಶ್ರೇಷ್ಟ ವ್ಯಕ್ತಿತ್ವ ಅವರಲ್ಲಿತ್ತು : ಡಾ.ನರಸಿಂಹ ಶರ್ಮ ಕಾನಾವು















ಮುಕ್ಕೂರು ಊರ ಅಭಿಮಾನಿಗಳ ನೇತೃತ್ವದಲ್ಲಿ ಅ.3 ರಂದು ನಿಧನರಾದ ಬೋಳಕುಮೇರು ಆಳ್ವಫಾರ್ಮ್ಸ್ ನ ಹಿರಿಯರಾದ ದಿ.ಕುಂಬ್ರ ಲಲಿತಾ ಎಸ್ ಆಳ್ವ ಅವರಿಗೆ ಮುಕ್ಕೂರು ಶಾಲಾ ವಠಾರದಲ್ಲಿ ಅ.12 ರಂದು ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಡೆಯಿತು.

ಪೆರುವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ,
ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,
ಜೇಸಿ ಮಲ್ಲಿಕಾ ಎಲ್ ಶೆಟ್ಟಿ ಕುಂಜಾಡಿ ,ನೋಟರಿ ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ ,
ಸಭಾಧ್ಯಕ್ಷತೆ ವಹಿಸಿದ್ದ ಕಾನಾವು ಕ್ಲಿನಿಕ್ ನ ಮುಖ್ಯಸ್ಥ ಡಾ|ನರಸಿಂಹ ಶರ್ಮ ಕಾನಾವುರವರು ಲಲಿತ ಎಸ್.ಆಳ್ವರವರ ಆದರ್ಶ ಗುಣಗಳ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.

ವಿಜಯ ಬ್ಯಾಂಕ್ ನ ನಿವೃತ್ತ ಎಜಿಎಂ ಅಗ್ರಾಳ ಮನೋಹರ ಆಳ್ವ, ಕುಂಬ್ರ ದಯಾಕರ ಆಳ್ವ ಅವರು ಮನೆಯವರ ಪರವಾಗಿ ಊರವರಿಗೆ ಕೃತಜತೆ ಸಲ್ಲಿಸಿದರು. ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ದೀಪ ಪ್ರಜ್ವಲಿಸಿದರು. ಆ ಬಳಿಕ ಪುಷ್ಪನಮನ, ಮೌನ ಪ್ರಾರ್ಥನೆ ಮೂಲಕ ಲಲಿತಾ ಎಸ್ ಆಳ್ವ ಅವರಿಗೆ ಗೌರವ ಸಲ್ಲಿಸಲಾಯಿತು.
ಸಭಿಕರ ಪರವಾಗಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಗೌಡ ಕೊಂಡೆಪ್ಪಾಡಿ, ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ನುಡಿ ನಮನ ಸಲ್ಲಿಸಿದರು. ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜೈನುದ್ದೀನ್ ತೋಟದಮೂಲೆ ವಂದಿಸಿದರು.










