ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ 75 ದಿನಗಳ ಸ್ವಚ್ಛತಾ ಅಭಿಯಾನ ಪಂಚಸಪ್ತತಿ-2025 ಅಂಗವಾಗಿ ಸ್ಪಂದನ ಗೆಳೆಯರ ಬಳಗ (ರಿ.)ಅಡ್ತಲೆ ವತಿಯಿಂದ ಗ್ರಾಮ ಪಂಚಾಯತ್ ಅರಂತೋಡು, ಚಂದನ ಯುವತಿ ಮಂಡಲ(ರಿ.) ಅಡ್ತಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವರ ಸಹಯೋಗದಲ್ಲಿ* ಅ. 12 ರಂದು ಬೆಳಿಗ್ಗೆ ಅಡ್ತಲೆ ವಠಾರದಲ್ಲಿ ನಡೆಯಿತು.



















ಅಡ್ತಲೆಯಾಗಿ ಹಾದುಹೋಗುವ ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಅಡ್ತಲೆ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಸುಮಾರು 35 ಕ್ಕೂ ಮಿಕ್ಕಿ ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.











