ಹಲವಾರು ವರ್ಷಗಳಿಂದ ಸ್ಥಳೀಯ ಜನರ ಬಹುಬೇಡಿಕೆಯ ರಸ್ತೆ ಅಭಿವೃದ್ಧಿಕರಣಕ್ಕೆ ಸಂಬಂಧಿಸಿ ಜಯನಗರದ ಮುಖ್ಯ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಅ13 ರಂದು ಗುದ್ದಲಿ ಪೂಜೆ ನಡೆಯಿತು.
















ಜಯನಗರ ಕಾಮತ್ ರವರ ಅಂಗಡಿಯಿಂದ ರಾಧಕೃಷ್ಣ ನಾಯಕ್ ರವರ ಮನೆಯವರೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಗ್ರೆಟಿಕರಣ ಗೊಳ್ಳಲಿದ್ದು ಈ ಯೋಜನೆಯು ಶಾಸಕರ ಎಸ್ ಸಿ,ಎಸ್ ಟಿ ಅನುದಾನದಲ್ಲಿ 5 ಲಕ್ಷ ರೂಪಾಯಿ ಹಾಗೂ ನಗರ ಪಂಚಾಯತ್ ಅನುದಾನದಿಂದ 10 ಲಕ್ಷ ರೂಪಾಯಿ ಮಂಜೂರು ಗೊಂಡಿರುತ್ತದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು ಭಾಗೀರಥಿ ಮುರುಳ್ಯ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ನಗರ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷರಾದ ಬುದ್ಧ ನಾಯ್ಕ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್,
ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕಿಶೋರಿ ಶೇಟ್, ಸ್ಥಳೀಯ ಸದಸ್ಯರಾದ ಶಿಲ್ಪಾ ಸುದೇವ್, ಸ್ಥಳೀಯ ಮುಖಂಡರುಗಳಾದ ರಾಧಾಕೃಷ್ಣ ನಾಯಕ್, ಪ್ರವೀಣ್ ಕುಮಾರ್ ಎ ಎಂ, ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಶಾಂತಿನಗರ, ಸ್ಥಳೀಯರಾದ ಉಸ್ಮಾನ್ ಜಯನಗರ, ಸುಂದರ ಕುದ್ಪಾಜೆ, ರಮೇಶ್ ಕುದ್ಪಾಜೆ,ಗುತ್ತಿಗೆದಾರ ನವೀನ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.










