ನೂತನವಾಗಿ ಆರಂಭಗೊಂಡ ಚಂದನ ಯುವತಿ ಮಂಡಲ(ರಿ) ಅಡ್ತಲೆ ಇದರ ಪದ ಗ್ರಹಣ ಮತ್ತು ಮಾಹಿತಿ ಕಾರ್ಯಕ್ರಮ ಅಕ್ಟೋಬರ್ 12ನೇ ರವಿವಾರ ಸ. ಹಿ. ಪ್ರಾ ಶಾಲೆ ಅಡ್ತಲೆಯಲ್ಲಿ ನಡೆಯಿತು.















ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರು ಉದ್ಘಾಟಿಸಿ ಶುಭ ಹಾರೈಸಿದರು. ದಿಕ್ಸೂಚಿ ಮಾತುಗಳನಾಡಿದ ದಿನೇಶ್ ಮಡಪ್ಪಾಡಿ ಯವರು" ಪರಸ್ಪರ ಸಹಕಾರ ಅನ್ಯೋನ್ಯತೆಗಳಿದ್ದರೆ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಮಾರ್ಗ ಹುಡುಕಿ ಅದನ್ನು ಪರಿಹರಿಸಲು ಸಾಧ್ಯ "ಎಂದು ತಿಳಿಸಿದರು ಹಾಗೂ ಯುವತಿ ಮಂಡಲವನ್ನು ಯಶಸ್ವಿಯಾಗಿ ನಡೆಸುವ ಮಾರ್ಗೋಪಾಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದನ ಯುವತಿ ಮಂಡಲದ ಅಧ್ಯಕ್ಷೆಯಾದ ಸರಸ್ವತಿ ಕೆ ವಹಿಸಿದ್ದರು. ವೇದಿಕೆಯಲ್ಲಿ ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ರಾದ ವಿನಯ್ ಬೆದ್ರುಪಣೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಭವಾನಿ ಶಂಕರ ಅಡ್ತಲೆ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಲೋಹಿತ್ ಮೇಲಡ್ತಲೆ , ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಭಾಗೀರಥಿ ಕೃಷ್ಣಪ್ಪ ಬೆಳ್ಳಿಪಾಡಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಯಶೋಧ ಜಯರಾಮ್ ಅಡ್ತಲೆ ಪ್ರಾರ್ಥಿಸಿ, ರೇಖಾ ಪ್ರವೀಣ್ ಪಾನತ್ತಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ದಿವ್ಯ ಮೋಹನ್ ಅಡ್ತಲೆ ವಂದಿಸಿದರು. ಅಶ್ವಿನಿ ಅಜಿತ್ ಪಿಂಡಿ ಮನೆ ಕಾರ್ಯಕ್ರಮ ನಿರೂಪಿಸಿದರು.
ಚಂದನ ಯುವತಿ ಮಂಡಲದ ಸರ್ವ ಸದಸ್ಯರು ಸಹಕರಿಸಿದರು.










