ಇಂಪಾರ್ಟೆಂಟ್ ಎಫ್‌ಸಿ ಗುತ್ತಿಗಾರು ಸಂಘದ ವಾರ್ಷಿಕ ಮಹಾಸಭೆ ಗುತ್ತಿಗಾರು, ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ಮುಳಿಯ ಸಾತ್ವಿಕ್ ವಹಿಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲ ಗುತ್ತಿಗಾರಿನ ಗೌರವಾಧ್ಯಕ್ಷ ಲೋಹಿತ್ ಚೈಪ್ಪೆ, ಯುವಕ ಮಂಡಲ ಗುತ್ತಿಗಾರಿನ ಅಧ್ಯಕ್ಷ ಅಜಿತ್ ಬಕಿಲ ಹಾಗೂ ಗುತ್ತಿಗಾರು ರಬ್ಬರ್ ಸೊಸೈಟಿಯ ನಿರ್ದೇಶಕ ಲೋಕೇಶ್ವರ ಪೈಕ್ಕ ಉಪಸ್ಥಿತರಿದ್ದರು.
















ಸಭೆಯಲ್ಲಿ ನೂತನ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮುಳಿಯ ಸಾತ್ವಿಕ್ ಅವರನ್ನು ಅಧ್ಯಕ್ಷರಾಗಿ, ಕೌಶಿಕ್ ಮುಳಿಯ, ಸುಮುಖ ರಾಮ್, ಶ್ರೀಶರಣ್ ಮೋಗ್ರಾ ಮತ್ತು ಮೋನಿಷ್ ಬಕಿಲ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಅಶ್ಲೇಶ್ ಕೆ.ಡಿ. ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಕಿರಣ್ ವಳಲಂಬೆ ಅವರನ್ನು ಖಜಾಂಚಿಯಾಗಿ ಹಾಗೂ ವರ್ಶಿತ್ ಕದ್ತಲ್ಕಜೆ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಅಮಿತ್ ನಾಯಕ್, ಚರಣ್ ಕೊಂಬೊಟ್ಟು, ಪ್ರೀತಮ್ ನಾರಣಕಜೆ, ಬಾಲಕೃಷ್ಣ ಉಜಿರಡ್ಕ, ರಾಕೇಶ್ ಮೆಟ್ಟಿನಡ್ಕ ಮತ್ತು ಎಲೈ ಅರಸ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.










