ಸುಳ್ಯ ತಾಲೂಕಿನ ಆಡಿಂಜಾದಿಂದ ಆಲೆಟ್ಟಿ ವರೆಗಿನ ಲೋಕೋಪಯೋಗಿ ರಸ್ತೆಯು ತೀವ್ರ ಹದೆಗೆಟ್ಟಿದ್ದು, ಇಲಾಖೆಯಾಗಲಿ, ಜನಪ್ರತಿನಿದಿಗಳಾಗಲಿ ಎಷ್ಟೇ ಮನವಿಮಾಡಿದರೂ ಸ್ಪಂದಿಸದೇ ಇರದಿರುವುದರಿಂದ ಈ ಭಾಗದ ಸಾರ್ವಜನಿಕರು ಮತ್ತು ಸ್ಥಳೀಯ ಯುವಕ ಮಂಡಲಗಳ ಸದಸ್ಯರು ಸೇರಿಕೊಂಡು ಅ. 12ರಂದು ಬೆಳಗ್ಗಿನಿಂದ ಸಂಜೆಯವರೆಗೆ ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಪಡಿಸಿದರು.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ತುಂಬಿರುವ ರಸ್ತೆಗೆ ರೆಡಿ ವೆಟ್ ಮಿಕ್ಸ್ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದರು.
ಈ ರಸ್ತೆಯಲ್ಲಿ ಸಂಚರಿಸುವ ಎಸ್ ವಿ ಕನ್ ಸ್ಟ್ರಕ್ಷನ್ ನ ಪುನೀತ್ ಆಳುಗುಂಜಾರವರು ಯಾವುದೇ ಪಲಾಪೇಕ್ಷೆ ಇಲ್ಲದೆ ಸುಮಾರು ಮೂವತ್ತು ಸಾವಿರ ಮೌಲ್ಯದ 6 ಯೂನಿಟ್ ವೆಟ್ ಮಿಕ್ಸ್ ಕಾಂಕ್ರೀಟ್ ಕೊಡುಗೆಯಾಗಿ ನೀಡಿದ್ದರು. ಸ್ಥಳೀಯರಾದ ಸುಧಾಕರ್ ಬಾಟೋಳಿ ಯವರು ಹಿಟಾಚಿಯನ್ನು ನೀಡಿ ಸಹಕರಿಸಿದರು.
ಹಿರಿಯ ಮುಖಂಡ ತೇಜಕುಮಾರ್ ಬಡ್ಡಡ್ಕ ಮತ್ತು ಪುರುಷೋತ್ತಮ ದೋಣಿ ಮೂಲೆ, ಉದಯಕುಮಾರ್ ಬರೆಮೇಲು ಉಪಾಹಾರ ವ್ಯವಸ್ಥೆ ಮಾಡಿ ಶ್ರಮಾಧಾನದಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯರಾದ ಶಂಕರ ಪಾಟಾಳಿ ಆಡಿಂಜ ಇಡೀ ದಿನ ತಮ್ಮ ಜೀಪ್ ನಲ್ಲಿ ಜಲ್ಲಿ ಸಾಗಾಟ ಮಾಡಲು ಸಹಕರಿಸಿದ್ದರು.
















ಶ್ರಮದಾನದಲ್ಲಿ ವಿನಯ ಗೂಡಿಂಜ, ತೀರ್ಥರಾಮ ಬಡ್ಡಡ್ಕ, ವಿಶ್ವನಾಥ ಪಾತಿಕಲ್ಲು, ಸತೀಶ್ ಗೂಡಿಂಜಾ, ರಮೇಶ ಕೂರ್ನಡ್ಕ (ಮಾವಜಿ) ಕರುಣಾಕರ ದೋಣಿಮೂಲೆ, ಸಂದೀಪ್ ಗುಂಡ್ಯ ಮೊದಲಾದವರು ಪಕ್ಷಬೇಧ ಮರೆತು ಭಾಗವಹಿಸಿದ್ದರು.
ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ನೇತೃತ್ವವಹಿಸಿ, ಮಾರ್ಗದರ್ಶನ ನೀಡಿದ್ದರು.
ಊರಿನ ರಸ್ತೆಯ ದುರಸ್ಥಿಯಲ್ಲಿ ಮತ್ತು ಶ್ರಮದಾನದಲ್ಲಿ ಭಾಗವಹಿಸಿದ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕಲ್ಲಪಲ್ಲಿ, ಕೂರ್ನಡ್ಕ, ಆಲೆಟ್ಟಿ ಭಾಗದ ಜನರನ್ನು ಸೇರಿಸಿಕೊಂಡು ರಸ್ತೆ ಅಭಿವೃದ್ಧಿ ಸಮಿತಿ ರಚಿಸಿ ಪಕ್ಷಾತೀತವಾಗಿ ಹೋರಾಟ ಮಾಡಲು ಈ ಭಾಗದ ಜನತೆ ನಿರ್ಧರಿಸಿದ್ದಾರೆ.










