














ಬೆಳ್ಳಾರೆಯ ಸ್ನೇಹಿತರ ಕಲಾ ಸಂಘ ಮತ್ತು ಸ್ನೇಹಾಂಜಲಿ ಕುಣಿತ ಭಜನಾ ತಂಡದಿಂದ ಅನಾರೋಗ್ಯ ಪೀಡಿತರಾದ ಹರೀಶ್ ಕುಮಾರ್ ರಾಮಕುಮೇರಿಯವರ ತುರ್ತುಚಿಕಿತ್ಸೆಗೆ ರೂ. ೨೬,೦೫೦ ಧನ ಸಹಾಯವನ್ನು ಅ. 14ರಂದು ನೀಡಲಾಯಿತು.
ಈ ಸಂದರ್ಭದಲ್ಲಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ವಸಂತಗೌಡ ಪಡ್ಪು, ಕಾರ್ಯದರ್ಶಿ ಗಣೇಶ್ ಪಾಟಾಳಿ, ಸ್ನೇಹಾಂಜಲಿ ಕುಣಿತ ಭಜನಾ ತಂಡದ ಸಂಚಾಲಕರಾದ ಮಹಾಲಿಂಗ ಪಾಟಾಳಿ ಕುರುಂಬುಡೇಲು ಮತ್ತು ಶ್ರೀನಿವಾಸ್ ಕುರುoಬುಡೇಲು, ಸಂಘದ ಪೂರ್ವ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಕುರುoಬುಡೆಲು ಹಾಗೂ ಸಂಜೀವ ಮಣಿಯಾಣಿ ಬೀಡು, ಸದಸ್ಯರಾದ ಚೆನ್ನಪ್ಪ ಕಾವಿನಮೂಲೆ ಉಪಸ್ಥಿತರಿದ್ದರು










