ಪ್ರಜಾಧ್ವನಿ ಕರ್ನಾಟಕ ಸಮಿತಿಯ ವಿಶೇಷ ಸಭೆ

0

ಪ್ರಜಾಧ್ವನಿ ಕರ್ನಾಟಕ ಕೇಂದ್ರ ಸಮಿತಿ ಸುಳ್ಯ ಇದರ ವಿಶೇಷ ಸಭೆಯು ಉಪಾಧ್ಯಕ್ಷ ಪ್ರವೀಣ್ ಮುಂಡೋಡಿಯವರ ಅಧ್ಯಕ್ಷತೆಯಲ್ಲಿ ಶಿವಕೃಪ ಸಭಾಭವನದಲ್ಲಿ ಅ. 14 ರಂದು ನಡೆಯಿತು.

ಮುಂದಿನ ತಿಂಗಳ ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಅಲ್ಲದೇ ಅದೇ ದಿನಕ್ಕೆ ಪ್ರಜಾಧ್ವನಿ ಕರ್ನಾಟಕ ಕೇಂದ್ರ ಸಮಿತಿಯ ವಾರ್ಷಿಕೋತ್ಸವವನ್ನು ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಅಂದು ಪ್ರಜಾಧ್ವನಿ ಕರ್ನಾಟಕದ ಹೆಸರಿನಲ್ಲಿ ನೂತನವಾಗಿ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಲು ಉದ್ಘಾಟನೆ ಕಾರ್ಯ ನೆರವೇರಲಿದೆ. ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿಯೊಬ್ಬರನ್ನು ಆಹ್ವಾನಿಸಿ ಕನ್ನಡ ರಾಜ್ಯೋತ್ಸವ, ಮತ್ತು ಭಾರತದ ಸಂವಿಧಾನದ ಬಗ್ಗೆ ತಿಳಿಹೇಳುವ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಗ್ರಂಥವಾದ ಸಂವಿಧಾನದ ಮೇಲೆ ಸಾರ್ವಜನಿಕರು ಗೌರವ ಹಕ್ಕು ಮತ್ತು ಪಾಲನೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೆ. ಸಿ. ಹರೀಶ್ ಪೆರಾಜೆ, ಎ. ಕೆ. ಇಬ್ರಾಹಿಂ, ದಿವಾಕರ ಪೈ. ಪ್ರಮೀಳಾ ಪೆಲ್ತಡ್ಕ, ಮಹೇಶ್ ಬೆಳ್ಳಾರ್ಕರ್, ಭರತ್ ಕುಕ್ಕುಜಡ್ಕ, ವಸಂತ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಾಹುಕಾರ್ ಅಶ್ರಫ್ ವಂದಿಸಿದರು.