ಪಂಜಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು

0

ಹೊಸ ಮಂಜೂರಾತಿಯ ಶಾಲೆಗಳ ಪಟ್ಟಿಯಲ್ಲಿ ಪಂಜ

ಅಮೃತ ಮಹೋತ್ಸವದ ಸಂಭ್ರಮದ ಸಂಸ್ಥೆಗೆ ಸಂತಸದ ಸುದ್ದಿ

2025 – 27 ನೇ ಸಾಲಿನಲ್ಲಿ ಎಡಿಬಿ ಸಾಲ ಯೋಜನೆ ಮತ್ತು ರಾಜ್ಯ ಅನುದಾನದಿಂದ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಸರ್ಕಾರ ಮಂಜೂರು ಮಾಡಿರುವ ಶಾಲೆಗಳ ಪಟ್ಟಿಯಲ್ಲಿ ಪಂಜ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಂಜ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದ್ದು ಪಂಜದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಗೊಳ್ಳಲು ಹಸಿರು ನಿಶಾನೆ ದೊರೆತಂತಾಗಿದೆ.

ಅಮೃತ ಮಹೋತ್ಸವ ಆಚರಿಸಿಕೊಳ್ಳಲು ಸಿದ್ದಗೊಂಡಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿತ್ತಲ್ಲದೆ, ಕೊಠಡಿಗಳೂ ಶಿಥಿಲಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ. , ಹಳೆ ವಿದ್ಯಾರ್ಥಿ ಸಂಘ ದ ನೇತೃತ್ವದಲ್ಲಿ ಕಳೆದ ಎಪ್ರಿಲ್ ತಿಂಗಳಿನಿಂದ ವಿವಿಧ ಕೆ.ಪಿ.ಎಸ್. ಆರಂಭಕ್ಕೆ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗಿದ್ದರು. ಮಾಜಿ ತಾ.ಪಂ ಸದಸ್ಯ ಅಬ್ದುಲ್ ಗಫೂರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು ನೇತೃತ್ವದಲ್ಲಿ ಸರ್ಕಾರ ಮಟ್ಟದಲ್ಲೂ ಪ್ರಯತ್ನ ನಡೆಸಲಾಗಿತ್ತು. ಇದೀಗ ಕೆ.ಪಿ.ಎಸ್. ಮಂಜೂರಾತಿಗೊಂಡ ಪಟ್ಟಿಯಲ್ಲಿ ಪಂಜದ ಹೆಸರೂ ಸೇರಿದೆ.