ಹಬ್ಬಗಳ ಪ್ರಯುಕ್ತ ಗೋಕುಲಂ ಮಕ್ಕಳ ವಸ್ತ್ರ ಮಳಿಗೆಯಲ್ಲಿ ಭಾರಿ ರಿಯಾಯಿತಿ ಮಾರಾಟ

0

ಪ್ರತಿ ಖರೀದಿಗೆ ಗ್ರಾಹಕರಿಗೆ ವಿಶೇಷ ಗಿಫ್ಟ್ ಕೂಪನ್ ಕೊಡುಗೆ

ಮುಂಬರುವ ಹಬ್ಬಗಳ ಪ್ರಯುಕ್ತ ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಗೋಕುಲಂ ಮಕ್ಕಳ ವಸ್ತ್ರ ಮಳಿಗೆಯಲ್ಲಿ 3 ನೇ ವರ್ಷಕ್ಕೆ ಪಾದಾರ್ಪಣೆಯಸುಸಂದರ್ಭದಲ್ಲಿ ಭಾರಿ ರಿಯಾಯಿತಿ ದರದ ಮಾರಾಟ ಆರಂಭ ಗೊಂಡಿದೆ.

ಈ ಸಂದರ್ಭದಲ್ಲಿ ಹಬ್ಬಗಳ ಪ್ರಯುಕ್ತ ಆಯೋಜಿಸಲಾದ ಗಿಫ್ಟ್ ಕೂಪನ್ ಇದರ ಬಿಡುಗಡೆಯನ್ನು ಹೆಚ್. ಡಿ. ಎಫ್. ಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಪ್ರಖ್ಯಾತ್ ಶೆಟ್ಟಿಯವರುನೆರವೇರಿಸಿದರು. ಜಿ. ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯ ಉದ್ಯೋಗಿ ನಾರಾಯಣ ಪ್ರಕಾಶ್, ಭೂಮಿ ಇಲೆಕ್ಟ್ರಿಕಲ್ಸ್ ಮಾಲಕ ಸುರೇಶ್ ಆರಂಬೂರು, ಮಂಡೋವಿ ಮೋಟರ್ಸ್ ಉದ್ಯೋಗಿ ಪುನೀತ್, ನವನೀತ್ ಎಂಟರ್ ಪ್ರೈಸೆಸ್ ಮಾಲಕ ಕೇಶವ ನಾಯಕ್ ಸುಳ್ಯ, ಹೆಚ್.ಇ. ಎಫ್ ಅಧ್ಯಕ್ಷ ಶರತ್, ಪಾಲುದಾರ ಅನೂಪ್ ಪೈ ಪಾಪ್ಯುಲರ್ , ಸಿಬ್ಬಂದಿಗಳಾದ ಸೌಮ್ಯ ಎಂ. ಕೆ,ತೇಜಸ್ವಿನಿಉಪಸ್ಥಿತರಿದ್ದರುಯುವ ಉದ್ಯಮಿ ಚಿದಾನಂದ ವಿದ್ಯಾನಗರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಸಿದರು. ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.

ಮಳಿಗೆಯಲ್ಲಿ ಮಕ್ಕಳ ಸಿದ್ಧ ಉಡುಪುಗಳ ಮೇಲೆ ಹಬ್ಬದ ಪ್ರಯುಕ್ತ ಶೇ 50% ರ ತನಕ ಡಿಸ್ಕೌಂಟ್ ಸೇಲ್ಸ್ ಹಾಗೂ ಪ್ರತಿ ಖರೀದಿಗೆ ಗ್ರಾಹಕರಿಗೆ ವಿಶೇಷವಾಗಿ ಗಿಫ್ಟ್ ಕೂಪನ್ ನೀಡಲಾಗುವುದು. ಸುಳ್ಯ ಜಾತ್ರೋತ್ಸವದ ತನಕ ಈ ಕೊಡುಗೆಗಳನ್ನು ಗ್ರಾಹಕರಿಗೆ ನೀಡುವುದಾಗಿ ಪಾಲುದಾರರು ತಿಳಿಸಿದರು.