Home ಪ್ರಚಲಿತ ಸುದ್ದಿ ಸುಳ್ಯದ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಆಶೀರ್ವಾದ ಗೋಲ್ಡ್ & ಡೈಮಂಡ್ಸ್ ಆಭರಣ ಮಳಿಗೆ ಶುಭಾರಂಭ

ಸುಳ್ಯದ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಆಶೀರ್ವಾದ ಗೋಲ್ಡ್ & ಡೈಮಂಡ್ಸ್ ಆಭರಣ ಮಳಿಗೆ ಶುಭಾರಂಭ

0

ಸುಳ್ಯ ಗಾಂಧಿನಗರದ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಶೇಖ್ ಸಲ್ಮಾನ್ ಮತ್ತು ನಿಶ್ಮಾ ರವರ ಮಾಲಕತ್ವದ ಆಶೀರ್ವಾದ ಗೋಲ್ಡ್ ಮತ್ತು ಡೈಮಂಡ್ಸ್ ಆಭರಣಗಳ ಮಳಿಗೆಯು ಅ.16 ರಂದು ಶುಭಾರಂಭಗೊಂಡಿತು.

ಮಾಲಕರ ತಾಯಿ ಕೌಸರ್ ಭಾನು ರವರು ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಅಹ್ಮದ್, ಸುಲ್ತಾನ್ ಪುತ್ತೂರು, ಆಸೀಫ್, ಕರುಣಾಕರ ಬೆಳ್ಳಿಪ್ಪಾಡಿ, ಶೇಖ್ ಜಹೀರ್ ಅಹ್ಮದ್, ಸಿರಾಜ್ ಅಹ್ಮದ್, ಓರ್ಕುಟ್ ಮೊಬೈಲ್ಸ್ ನ ಮಾಲಕ ಶಬೀರ್, ಶಕೀಲ್ ಕಂಬಳಬೆಟ್ಟು, ನದೀಮ್ ಅರಂಬೂರು, ರಿಜ್ವಾನ್ ಗೂನಡ್ಕ, ಸರ್ಫಜ್ ನವಾಜ್, ನಸೀರ್ ಅಹ್ಮದ್, ನೌಶಾದ್ ಪುತ್ತೂರು, ಫರ್ವಿಜ್ ಕಟ್ಟತ್ತಾರು, ಶಾಹಿನ್ ಕಿಸ್ಮತ್ ವಿಟ್ಲ ರವರು ಉಪಸ್ಥಿತರಿದ್ದರು.

ಮಳಿಗೆಯಲ್ಲಿ ಹೊಸ ವಿನ್ಯಾಸದ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳು ಮತ್ತು ವಜ್ರದ ಆಭರಣಗಳ ಸಂಗ್ರಹವಿದೆ. ಆಂಟಿಕ್ ಜ್ಯುವೆಲ್ಲರಿ ಹಾಗೂ ಆಕರ್ಷಕ ವಜ್ರದ ಆಭರಣಗಳು ಇಲ್ಲಿದೆ. ವಜ್ರದ ಉಂಗುರಗಳು ಮತ್ತು ಟ್ರೆಡಿಷನಲ್ ಸ್ಟೋನ್ ಗಳು ರೂ.8000/- ಮೌಲ್ಯದಿಂದ ಆರಂಭಗೊಂಡು ವಿವಿಧ ವಿನ್ಯಾಸದಲ್ಲಿ ಲಭ್ಯವಿದೆ. ಆಶೀರ್ವಾದ ಸ್ವರ್ಣ ಉಳಿತಾಯ ಯೋಜನೆಯ ಮೂಲಕ ಮಾಸಿಕ ಸುಲಭ ಕಂತುಗಳನ್ನು ಪಾವತಿಸಿ ಚಿನ್ನಾಭರಣಗಳನ್ನು ಪಡೆಯಲು ಅವಕಾಶವಿದೆ. ಯೋಜನೆಯ ಮುಕ್ತಾಯದ ನಂತರ ಖರೀದಿಸುವ ಚಿನ್ನಾ ಭರಣಗಳಿಗೆ ಮೇಕಿಂಗ್ ಚಾರ್ಜಸ್ ಇರುವುದಿಲ್ಲ. ಪ್ರತಿ ಖರೀದಿಗೆ ಗ್ರಾಹಕರಿಗೆ ಖಚಿತ ಉಡುಗೊರೆಗಳನ್ನು ಶುಭಾ ರಂಭದ ಪ್ರಯುಕ್ತ ನೀಡಲಾಗುವುದು ಎಂದು ಮಾಲಕರು ತಿಳಿಸಿದರು.

NO COMMENTS

error: Content is protected !!
Breaking