ನಡುಮುಟ್ಲು ಮನೆತನ, ಊರಿನ ದೇವಾಲಯ, ದೈವಸ್ಥಾನದ ಅಭಿವೃದ್ಧಿಗೆ ಕೈ ಜೋಡಿಸಿದವರು : ಜನಾರ್ದನ ಗೌಡರು : ಎ.ಟಿ.ಕುಸುಮಾಧರ
ಇತ್ತೀಚೆಗೆ ನಿಧನರಾದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಡಾ.ಕುರುಂಜಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಅ.೧೬ ರಂದು ನಡೆಯಿತು.

ನುಡಿನಮನ ಅರ್ಪಿಸಿ ಮಾತನಾಡಿದ ಚಂದ್ರಶೇಖರ ಬಟ್ಟೋಡಿ, ನಾರ್ದನ ಗೌಡರು ಅಗಾಧ ಭಂಡಾರ, ಅವರು ಜನರ ನಾಡಿ ವೈದ್ಯರೂ ಹೌದು ಯಾಕೆಂದರೆ ಜನರ ಭಾವನೆಗಳನ್ನು ಅರ್ಥೈಸುತಿದ್ದರು.
















ನಮ್ಮ ನಡುಮುಟ್ಲು ಮನೆತನ ರಾಜರ ಆಡಳಿತ ಸಂದರ್ಭದಲ್ಲಿ ಉಂಬಳಿ ಬಂದ ಜಾಗದಲ್ಲಿ ನೆಲೆಸಿತ್ತು. ರಥಕ್ಕೆ ಎಣ್ಣೆ ಕೊಡುತಿದ್ದ ಮನೆತನತವಾಗಿತ್ತು. ನಮ್ಮ ಚಿಕ್ಕಪ್ಪ ಜನಾರ್ದನ ಗೌಡರು ನಮ್ಮನ್ನೆಲ್ಲಾ ಸೇರಿಸಿ ಕುಟುಂಬದ ಧರ್ಮದೈವದ ಜೀರ್ಣೋದ್ಧಾರ ಮಾಡಿದ ವ್ಯಕ್ತಿ. ೩೯ ಮನೆಗಳಿರುವ ನಮ್ಮ ನಡುಮುಟ್ಲು ಕುಟುಂಬದಲ್ಲಿ ಠೇವಣಿ ಇಟ್ಟು ಅದರ ಹಣದಿಂದಲೇ ಧರ್ಮ ನಡಾವಳಿ ನಡೆಸಲು ಹಾದಿ ತೋರಿದ ಪುಣ್ಮಾತ್ಮ ಅವರು. ಅಂತಹ ಮುಂದಾಲೋಚನೆ ಅವರದ್ದಾಗಿತ್ತು. ಅವರ ಅಂತಿಮ ಕ್ಷಣಗಳ ಒಂದು ಆಸೆ ಇದೆ ಅದೆಂದರೆ ತರುವಾಡು ಮನೆ ನಿರ್ಮಿಸುವುದಾಗಿತ್ತು. ಅದನ್ನು ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದರು.

ತನ್ನ ಮಕ್ಕಳಿಗೆ ಎಸ್ ನಿಂದ ಆರಂಭವಾಗುವ ಹೆಸರು ಕೊಟ್ಟ ಜನಾರ್ದನ ಗೌಡ ಎಲ್ಲದಕ್ಕೂ ಎಸ್ ಹೇಳುವವರು. ಮೊದಲಾಗಿ ತನ್ನ ಮನೆತನದ ದೈವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಬಳಿಕ ಊರಿನ ದೇವಾಲಯದ, ದೈವಸ್ಥಾನದ ಅಭಿವೃದ್ಧಿಯೊಂದಿಗೆ ಕೈ ಜೋಡಿಸಿದವರು. ಕಾರ್ಯರ್ತೋಡಿ ದೇವಾಲಯದ ಜೀರ್ಣೋದ್ಧಾರದಲ್ಲಿ ಇವರ ಪಾತ್ರ ಪ್ರಮುಖ. ಜೀರ್ಣೋದ್ಧಾರ ಸಂದರ್ಭ ಯಡಿಯೂರಪ್ಪ ಅವರನ್ನು ಐದು ಭಾರಿ ಭೇಟಿ ಮಾಡಲು ಹೋಗಿದ್ದಾರೆ. ೨೫ ಲಕ್ಷ ಅನುದಾನ ತರಿಸಿದವರು ಜನಾರ್ಧನ ಗೌಡ ರು ಎಂದು ಎ.ಟಿ ಕುಸುಮಾಧರ ಅವರು ನುಡಿದರು.

ಶ್ರೀಮತಿ ವಸಂತಿ ಜನಾರ್ದನ ಗೌಡ ಅವರು ದೀಪ ಬೆಳಗಿಸಿದರು. ಸೇರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯ್ದರು. ಮಕ್ಕಾಳಾದ ಸುನಿಲ್ ಎನ್.ಜೆ, ಸಂತೋಪ್ ಕುಮಾರ್ ನಡುಮುಟ್ಲು, ಸಂದೇಶ್ ಕುಮಾರ್ ನಡುಮುಟ್ಲು, ಶ್ರೀಮತಿ ಸೌಮ್ಯ ಅಳಿಯ ಶ್ಯಾಮ್ ಪ್ರಸಾದ್ ಅಡ್ಡತಡ್ಕ ಹಾಗೂ ಸಾವಿರಾರು ಸಂಖ್ಯೆಯ ಬಂಧುಗಳು ಉಪಸ್ಥಿತರಿದ್ದರು.




